ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು: ಮಂಜುನಾಥ್
ಕ.ಪ್ರ.ವಾರ್ತೆ , ಶಿಕಾರಿಪುರ , ಆ.9
ಶಿಕಾರಿಪುರ ಕ್ರಾಂತಿಯ ನಾಡಾಗಿದ್ದು ಹೋರಾಟದ ಕಿಚ್ಚು ಇಲ್ಲಿನ ನೆಲದ ಸ್ವಾಭಾವಿಕ ಗುಣವಾಗಿದೆ ಎಂದು ಪೊಲೀಸ್ ಉಪಾಧೀಕ್ಷಕ ಜಿ.ಬಿ. ಮಂಜುನಾಥ್ ಹೇಳಿದರು.
ಶುಕ್ರವಾರ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದಿಂದ ಚಲೇಜಾವ್ ಚಳವಳಿಗೆ 70 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಈಸೂರು ಹುತಾತ್ಮರ ಸ್ಮಾರಕದ ಬಳಿ ನಡೆದ ನೆನಪು ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಅವರುಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಕೇವಲ ಬ್ರಿಟೀಷರು,ಪೋರ್ಚುಗೀಸರು ಮಾತ್ರ ದೇಶಕ್ಕೆ ವಿರುದ್ದವಾಗಿದ್ದು ಇದೀಗ ಬಾಂಗ್ಲಾ, ಪಾಕಿಸ್ತಾನ್,ಚೈನಾ ಮತ್ತಿತರ ಹಲವು ದೇಶಗಳ ಜತೆ ಆಂತರಿಕ ಭಯೋತ್ವಾದನೆ ಹೆಚ್ಚಾಗಿ ಕಾಡುತ್ತಿದ್ದು ಎಂದರು.
ಈ ದಿಸೆಯಲ್ಲಿ ಪ್ರತಿಯೊಬ್ಬರೂ ದೇಶದ ಬಗ್ಗೆ ಹೆಚ್ಚಿನ ಅಭಿಮಾನವನ್ನು ಬೆಳೆಸಿಕೊಳ್ಳಬೇಕಾಗಿದೆ. ಹೆಮ್ಮೆಯ ಈಸೂರು ಗ್ರಾಮಕ್ಕೆ ಭೇಟಿ ನೀಡಿ ಹೋರಾಟಗಾರ ಹುತಾತ್ಮರ ಕುಟುಂಬವನ್ನು ಗೌರವಿಸುವುದಾಗಿ ಅವರು ತಿಳಿಸಿದರು.
ಹಿರಿಯ ಪರ್ತಕರ್ತ ಎಸ್.ಬಿ. ಮಠದ್, ತಾ.ಕಾ.ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿದರು.
ಕಾರ್ಯಕ್ರಮದ ಸವಿನೆನಪಿಗಾಗಿ ಸಸಿ ನೆಡಲಾಯಿತು. ಸಿಪಿಐ ಮಾದಪ್ಪ, ಪಿಎಸ್ಸೈ ಕಿರಣ ಕುಮಾರ್, ತಿಪ್ಪೇಸ್ವಾಮಿ, ಮೋಹನ್ ಕುಮಾರ್, ಜಿ.ಆರ್ ಹೆಗಡೆ,
ಪುರಸಭಾ ಸದಸ್ಯ ಪಾಲಾಕ್ಷಪ್ಪ, ಸುದರ್ಶನ್, ಹೊಳೆಬಸಪ್ಪ ಬಳಿಗಾರ್, ಫಯಾಜ್ ಅಹ್ಮದ್, ಶಿವಾನಂದ ಸಾನು, ಕೋಡ್ಯಪ್ಪ, ರಾಘವೇಂದ್ರಾಚಾರ್, ಜೋಸೆಫ್ ಇದ್ದರು.