ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮಾದರಿ ಸಂಘವಾಗಿಸಲು ಪ್ರಯತ್ನ'

Vishwanath S
Updated On : 10 Aug 2013, 12:18 pm

ಕ.ಪ್ರ.ವಾರ್ತೆ , ಶಿವಮೊಗ್ಗ  ,  ಆ.9
ಜಿಲ್ಲಾ ಸರ್ಕಾರಿ ನೌಕರರ ಸಂಘವನ್ನು ರಾಜ್ಯದಲ್ಲೇ ಮಾದರಿ ಸಂಘವಾಗಿ ಬೆಳೆಸಲು ನಮ್ಮ ತಂಡ ಸಿದ್ಧವಿದ್ದು, ನೌಕರರ ಹಿತ ಕಾಪಾಡಲು ತಮ್ಮ ತಂಡಕ್ಕೆ ಮತ ನೀಡಿ ಎಂದು ಜಿಲ್ಲಾ ಸಹಕಾರಿ ನೌಕರರ ಸಂಘದ ಪದಾಧಿಕಾರಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಿ.ಎಸ್. ಷಡಾಕ್ಷರಿ ಮನವಿ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಒಟ್ಟು 65 ಮತಗಳಿದ್ದು, ಇದರಲ್ಲಿ ಗೆಲ್ಲಲು 33 ಮತಗಳು ಅವಶ್ಯಕವಿದೆ. ಈ ಮತಗಳನ್ನು ಪಡೆಯುವ ಬಗ್ಗೆ ತಮ್ಮ ತಂಡಕ್ಕೆ ವಿಶ್ವಾಸವಿದೆ. ತಮ್ಮ ತಂಡದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ರಾಜ್ಯ ಪರಿಷತ್ ಸದಸ್ಯರ ಸ್ಥಾನಕ್ಕೆ ಎಚ್.ಕೆ. ನರಸಿಂಹಯ್ಯ, ಖಜಾಂಚಿ ಸ್ಥಾನಕ್ಕೆ ಡಿ.ಕೆ. ಬಾಲಚಂದ್ರ ಸ್ಪರ್ಧಿಸಿದ್ದಾರೆ. ಈ ಎಲ್ಲಾ ಸ್ಪರ್ಧಿಗಳು ಅನುಭವಿಗಳು ಹಾಗೂ ಸರ್ಕಾರಿ ನೌಕರರ ಉನ್ನತಿಗೆ ಶ್ರಮಿಸುವ ಅಭಿಲಾಶೆ ಹೊಂದಿದವರು. ಇಂತಹ ವ್ಯಕ್ತಿಗಳಿಗೆ ಮತ ನೀಡಿ ಬೆಂಬಲಿಸಿ ಎಂದರು.
ಚುನಾವಣೆಯಲ್ಲಿ ತಾವು ಆಯ್ಕೆಯಾದಲ್ಲಿ ಕೆಇಬಿ ವೃತ್ತದ ಬಳಿ ಇರುವ ಸಂಘದ ಖಾಲಿ ಜಾಗದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಹಾಗೂ ಕಲ್ಯಾಣ ಮಂದಿರ ನಿರ್ಮಿಸಲಾಗುವುದು, ಜಿಲ್ಲೆಯ ಸರ್ಕಾರಿ ನೌಕರರಿಗೆ ವಸತಿ ಸಹಕಾರ ಸಂಘದ ಮೂಲಕ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ ಯೋಜನೆ, ಸರ್ಕಾರದ ಮೂಲಕ ವಸತಿ ಗೃಹಗಳು ನಿರ್ಮಾಣ, ಮಹಿಳಾ ನೌಕರರ ಸಮಸ್ಯೆ ಆಲಿಸಲು ಪ್ರತ್ಯೇಕ ಸಲಹಾ ಕೇಂದ್ರ, ಸಂಘದ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಲಾಗುವುದು.
ಪ್ರತಿ ತಿಂಗಳಲ್ಲಿ ಒಂದು ದಿನ ಇಲಾಖೆಯ ನೌಕರರ ಕುಂದುಕೊರತೆ ಬಗ್ಗೆ ಚರ್ಚಿಸಲಾಗುವುದು. ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ತಿಳಿಸಿದರು.
ತಾವು ಸಂಘದ ಹಿಂದಿನ ಕಾರ್ಯಕಾರಿ ಸಮಿತಿಯಲ್ಲಿದ್ದು, ನೌಕರರ ಸಂಘದ ಭವನ ನಿರ್ಮಾಣದಲ್ಲೂ ಸಹಕರಿಸಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಕೆ. ನರಸಿಂಹಯ್ಯ, ಡಿ.ಕೆ.ಬಾಲಚಂದ್ರ, ಚಂದ್ರಪ್ಪ, ಮಾರುತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement