ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೈನಿಕರ ಹತ್ಯೆ: ಎಬಿವಿಪಿ ಖಂಡನೆ

Vishwanath S
Updated On : 10 Aug 2013, 12:19 pm

ಭದ್ರಾವತಿ: ಭಾರತೀಯ ಯೋಧರನ್ನು ಹತ್ಯೆಗೈದಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭದ್ರಾವತಿ ಶಾಖೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಾಕಿಸ್ತಾನವು ನೇರವಾಗಿ ಭಾರತವನ್ನು ಎದುರಿಸಲಾಗದೆ ಈ ರೀತಿ ಏಕಾಏಕಿ ಅಡಗಿ ಕುಳಿತು ಭಾರತೀಯ ಸೈನಿಕರ ಹತ್ಯೆ ಮಾಡಿರುವುದು ಪಾಕಿಸ್ತಾನದ ಹೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸ್ವಾತಂತ್ರ್ಯಾ ನಂತರದ ಎಲ್ಲಾ ಯುದ್ಧಗಳಲ್ಲೂ ಪಾಕಿಸ್ತಾನ ಸೋಲು ಕಂಡ ನಂತರ ಭಾರತದ ಸೈನ್ಯವನ್ನು ನೇರವಾಗಿ ಎದುರಿಸಲಾಗದೆ ಈ ರೀತಿಯ ಕುಚೇಷ್ಟೆ ಮಾಡುತ್ತಿದೆ. ಆದರೂ ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರೆಸುತ್ತಿರುವುದು ಬೇಧ ವ್ಯಕ್ತಪಡಿಸುವ ಸಂಗತಿಯಾಗಿದ್ದು, ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ.
ಕೇಂದ್ರ ಸರ್ಕಾರದ ಇಂತಹ ಕ್ರಮಗಳು ಧೈರ್ಯಶಾಲಿ ಯೋಧರು ಆತ್ಮಸ್ಥೈರ್ಯ ಕಳೆದುಕೊಳ್ಳಲು ಕಾರಣವಾಗಿದೆ. ಭಾರತದ ಸೈನ್ಯವು ಬಲಿಷ್ಠವಾಗಿದ್ದು, ಈ ರೀತಿಯ ಪಾಕಿಸ್ತಾನದ ಕುಚೇಷ್ಟೆಗಳಿಗೆ ನೇರವಾಗಿ ಉತ್ತರವನ್ನು ನೀಡಲು ಸರ್ಕಾರವು ಸೈನಿಕರಿಗೆ ಆದೇಶ ನೀಡಲಿ ಎಂದು ಅಭಾವಿಪ ಒತ್ತಾಯಿಸುತ್ತದೆ ಎಂದು ತಹಸೀಲ್ದಾರರಿಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.
ಸ್ನೇಹಸಿಂಚನ ವೇದಿಕೆ ಪದಾಧಿಕಾರಿಗಳ ಆಯ್ಕೆ
ಭದ್ರಾವತಿ: ಪಟ್ಟಣದ ಸ್ನೇಹಸಿಂಚನ ಕಲಾ- ಸಾಹಿತ್ಯ ವೇದಿಕೆಯ 2013-14ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಶೇಖರಪ್ಪ ಚಕ್ರಸಾಲಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕೋಗಲೂರು ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಕೆ.ಎಸ್. ಮೌನೇಶಾಚಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಎಂ.ಎಚ್. ಸಿದ್ದಪ್ಪ ಮತ್ತು ಈ. ಶಿವರುದ್ರಯ್ಯ, ಸಹಕಾರ್ಯದರ್ಶಿಗಳಾಗಿ ಸುಂದರೇಶ್ ಮತ್ತು ಎಸ್.ಎನ್. ಶಶಿಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಜೆ. ಉಮಾಪತಿ ಮತ್ತು ಎ. ತಿಪ್ಪೇಸ್ವಾಮಿ, ಕೋಶಾಧ್ಯಕ್ಷರಾಗಿ ಎಂ. ದುಶ್ಯಂತ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಎಚ್.ಆರ್. ಸುಧಾ ಮತ್ತು ಜಿ.ಕೆ. ಜ್ಞಾನೇಶ್ ಹಾಗೂ ಕಲಾ ಕಾರ್ಯದರ್ಶಿಗಳಾಗಿ ಚನ್ನಪ್ಪ ಆರ್. ಆಚಾರ್ ಮತ್ತು ಬಿ. ಮಂಜಪ್ಪ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಧರಗೌಡ, ಎಸ್.ಕೆ. ಮೋಹನ್, ಎಂ.ಆರ್. ಶಿವಕುಮಾರಸ್ವಾಮಿ, ಎಂ. ಹನುಮಂತಪ್ಪ, ಜಿ.ಎಸ್. ರುದ್ರೇಶ್ ಮತ್ತು ಪಿ.ಕೆ. ಸತೀಶ್ ಆಯ್ಕೆಯಾಗಿದ್ದಾರೆ.
ಸಾಹಿತ್ಯೋತ್ಸವ: ಪೂರ್ವಭಾವಿ ಸಭೆ
ಭದ್ರಾವತಿ: ಭದ್ರಾವತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಡಿ ಕಾರ್ಯನಿರ್ವಹಿಸುತ್ತಿರುವ ಹಿರಿಯೂರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವನ್ನು ಪುನಶ್ಚೇತನಗೊಳಿಸಿ ನೂತನ ಸಮಿತಿ ರಚಿಸಿದ್ದ ಅದರ ಕಾರ್ಯಚಟುವಟಿಕೆಗಳನ್ನೂ ಈಗಾಗಲೇ ಉದ್ಘಾಟನೆ ಮಾಡಿದ್ದು ಸೋಮವಾರ ಸಂಜೆ ಹಿರಿಯೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮಗಳ ಕಡೆಗೆ ಶೀರ್ಷಿಕೆಯಡಿ ಗ್ರಾಮೀಣ ಸಾಹಿತ್ಯೋತ್ಸವ ಹಮ್ಮಿಕೊಳ್ಳುವ ಉದ್ದೇಶದಿಂದ ಸಾಹಿತ್ಯಾಸಕ್ತರ ಸಭೆಯನ್ನು ಕರೆಯಲಾಗಿತ್ತು.
 ಈ ಸಭೆಯಲ್ಲಿ ಸಾಹಿತಿ ಬೆಳ್ಳಿಗನೂಡು ಎಂ.ನಾಗೇಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಯಪ್ಪ, ಭದ್ರಾವತಿ ತಾಲ್ಲೂಕು ಕ.ಸಾ.ಪ ಕಾರ್ಯದರ್ಶಿ ತಿಮ್ಮಪ್ಪ ಹಾಗೂ ಪಿ.ಕೆ.ಸತೀಶ್ ಮೊದಲಾದ ಸಾಹಿತ್ಯಾಸಕ್ತರು ಪಾಲ್ಗೊಂಡು ಚರ್ಚಿಸಿದರು.
ಹೋಬಳಿ ಘಟಕದ ಗೌರವಾಧ್ಯಕ್ಷರನ್ನಾಗಿ ಶಾಸಕ ಎಂ.ಜೆ.ಅಪ್ಪಾಜಿಯವನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಎಚ್.ಬಿ.ಸಿದ್ದೋಜಿರಾವ್ಬೋಸ್ಲೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಕೋಡ್ಲು ಯಜ್‌ಞಯ್ಯ ಮತ್ತು ಎಚ್.ಕುಮಾರ್, ಸಹಕಾರ್ಯದರ್ಶಿಗಳಾಗಿ ಸಿ.ಎಚ್.ಚನ್ನಕೇಶವಯ್ಯ ಮತ್ತು ಹರೀಶ್‌ಬಾಬು, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಟಿ.ಪ್ರಸನ್ನ ಮತ್ತು ಇ.ಎ.ದಯಾನಂದ ಹಾಗೂ ಕೋಶಾಧ್ಯಕ್ಷರಾಗಿ ಎ.ಎನ್.ಪುಟ್ಟಸ್ವಾಮಿ ಅವರುಗಳು ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಸಾಗರ: ಇಲ್ಲಿನ ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಎಚ್.ಕೆ. ನಾಗಪ್ಪ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 ಸಂಘದ ಉಪಾಧ್ಯಕ್ಷರಾಗಿ ಪಿ. ಶಿವಮೂರ್ತಿ, ಕಾರ್ಯದರ್ಶಿಯಾಗಿ ದತ್ತಾತ್ರೇಯ ಜೋಯಿಸ್, ಸಂಘಟನಾ ಕಾರ್ಯದರ್ಶಿಯಾಗಿ ಅಣ್ಣಪ್ಪಸ್ವಾಮಿ, ಖಜಾಂಚಿಯಾಗಿ ಎನ್.ಎಸ್. ಪಾರ್ವತಿ ಆಯ್ಕೆಯಾಗಿದ್ದಾರೆ.
 ನಿರ್ದೇಶಕರಾಗಿ ಶೈಲೇಶ್, ಹೆಮಂತ್ ಎಸ್. ಡೊಳ್ಳೆ, ಬಾಲಚಂದ್ರಪ್ಪ, ನರಸಿಂಹಮೂರ್ತಿ, ಕೃಷ್ಣ, ಇಬ್ರಾಹಿಂ ಸಾಬ್, ಮಾರುತಿ, ಸುಜಾತ, ವೀರಭದ್ರ, ಚೆಲುವ, ಮುನಿಯ, ಮಾರಪ್ಪ, ಕರ್ತಮಣಿ, ರಾಮಕೃಷ್ಣ, ಎಸ್.ಎ. ರಘು ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಂಘದ ನಿರ್ದೇಶಕರಾಗಿ ಎಸ್.ಬಿ. ರಘುನಾಥ್, ರಾಮಚಂದ್ರ, ಗುರುಪ್ರಸಾದ್, ಎಂ.ಬಿ. ಭೂಮೇಶ್, ಎಸ್. ಕುಪ್ಪರಾಜ್ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಪರಿಸರ ಅಭಿಯಂತರ ಎಚ್. ಪ್ರಭಾಕರ್ ಕಾರ್ಯನಿರ್ವಹಿಸಿದರು.
ಭಾಗೀದಾರರ ಸಮಾವೇಶ
ಭದ್ರಾವತಿ: ತಾಲೂಕಿನ ತಟ್ಟೇಹಳ್ಳಿ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ ಮತ್ತು ಅಜೀಂ ಪ್ರೇಮ್‌ಜೀಯವರ ಸಹಯೋಗದೊಂದಿಗೆ ಭಾಗೀದಾರರ ಸಮಾವೇಶವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೋಭ, ಇತರ ಸದಸ್ಯರುಗಳು, ಪೋಷಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದು ವಿದ್ಯಾರ್ಥಿಗಳಿಗೆ ಗುರುತಿನ ಕಾರ್ಡು, ನೋಟ್ ಪುಸ್ತಕ ಮತ್ತು ಪೆನ್ನುಗಳು, ಟೈ ಮತ್ತು ಬೆಲ್ಟ್‌ಗಳು ಹಾಗೂ ಶೌಚಾಲಯ ಸೌಲಭ್ಯವನ್ನು ಒದಗಿಸಲು ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯಶಿಕ್ಷಕಿ ನಿರ್ಮಲಾ ತಿವಾರಿ ಸಹ ಈ ಸಮಯದಲ್ಲಿ ಉಪಸ್ಥಿತರಿದ್ದರು.
ನಂತರ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಉದ್ಘಾಟಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೋಭ ಮತ್ತಿತರ ಸದಸ್ಯರುಗಳು ವಿದ್ಯಾರ್ಥಿಗಳಿಗೆ ಹಾಲು ವಿತರಿಸಿದರು.
ಅರ್ಹರಿಂದ ಅರ್ಜಿ ಆಹ್ವಾನ
ಶಿವಮೊಗ್ಗ: ತಾಂತ್ರಿಕ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಿವಮೊಗ್ಗದ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್‌ನಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ ಪ್ರಥಮ ವರ್ಷದ ಡಿಪ್ಲೋಮಾ ಸ್ಥಾನಗಳನ್ನು ಭರ್ತಿ ಮಾಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ವ್ಯಾಸಂಗ ಮಾಡಲು ಬಯಸುವ ಅಭ್ಯರ್ಥಿಗಳು ಎಸ್ಸೆಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳು ರು. 100 ಹಾಗೂ ಪರಿಶಿಷ್ಟ ಅಭ್ಯರ್ಥಿಗಳು ರು. 50 ಶುಲ್ಕ ಪಾವತಿಸಿ, ಆಗಸ್ಟ್ 13ರೊಳಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿಗೆ ತೆಗೆಸಿದ ಡಿಡಿಯನ್ನು ಕಾರ್ಯಾಲಯಕ್ಕೆ ಸಲ್ಲಿಸಿ, ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. 13ರಂದು ಸಂಜೆ 5ಗಂಟೆಗೆ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. 14ರಂದು ಬೆಳಗ್ಗೆ 9ಗಂಟೆಯಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಕಾಲೇಜಿನಲ್ಲಿಯೇ ಪ್ರವೇಶ ಪಡೆಯಲು 14ರಂದು ಬೆಳ್ಗಗೆ 9 ಗಂಟೆಗೆ ಎಲ್ಲಾ ಮೂಲ ಮತ್ತು ನಕಲು ದಾಖಲಾತಿಗಳು ಹಾಗೂ ನಿಗದಿತ ಶುಲ್ಕದೊಂದಿಗೆ ಹಾಜರಾಗಬೇಕು. ವಿವರಗಳಿಗಾಗಿ ಇಲಾಖೆಯ ಅಂತರ್ಜಾಲ ತಾಣವನ್ನು ಅಥವಾ ದೂರವಾಣಿ ಸಂಖ್ಯೆ 08182-250365ನ್ನು ಸಂಪರ್ಕಿಸಬಹುದಾಗಿದೆ.
ತರಬೇತಿ
ಶಿವಮೊಗ್ಗ: ತೋಟಗಾರಿಕೆ ಇಲಾಖೆ ಎಂ.ಎಚ್. ಮರಿಗೌಡರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ತೋಟಗಾರಿಕೆ ದಿನಾಚರಣೆ ಅಂಗವಾಗಿ ಆಗಸ್ಟ್ 14ರಂದು ಇಲಾಖೆ ಆವರಣದಲ್ಲಿ ಪೌಷ್ಟಿಕ ತೋಟಗಳ ಅಭಿವೃದ್ಧಿ ಹಾಗೂ ಅಣಬೆ ಬೇಸಾಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ. ತೋಟಗಾರಿಕೆ ಬೆಳೆಗಾರರು ಈ ತರಬೇತಿಯ ಲಾಭ ಪಡೆದುಕೊಳ್ಳಿ.
ರಾಜ್ಯ ಮಟ್ಟಕ್ಕೆ ಆಯ್ಕೆ
ಭದ್ರಾವತಿ: ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಇನ್ಸ್‌ಪೈರ್ ಅವಾರ್ಡ್ ವಿಜ್ಞಾನ ಮಾದರಿ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಕಾಗದನಗರ ಆಂಗ್ಲ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಲಿಖಿತ ರೂಪಿಸಿದ ಊಜಿಜಿಜ್ಛಡ್ಝಿಢಜ ್ಖಡ್ಝಿಟ್ಝಣಛಡ್ಝ್ಟಿಟಿ ್ಟಜಿ ಏಝ್ಝ್ಜಡಿ ್ಝಟಿ ಎಛ್ಠಜಜಟ್ಝಿಟ್ಜಿ ಮಾದರಿಯು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಸಿಬ್ಬಂದಿ ಅಭಿನಂದಿಸಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಇನ್ಸ್‌ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಗರದ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ನಗರದ ರಾಗಿಗುಡ್ಡದ ಅಶೋಕ ಪ್ರೌಢಶಾಲೆ ಶಾಲೆಯ ವಿಜ್ಞಾನ ಶಿಕ್ಷಕಿ ಎಸ್.ಬಿ. ಪ್ರತಿಮಾ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಡಿಸಿದ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮಂಜುಶ್ರೀ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಸವಿ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಆರ್. ಪೃತ್ವಿಕ್ (ಕಸ ನಿರ್ವಹಣೆ ಮತ್ತು ಸಂಸ್ಕರಣೆ) ಮತ್ತು 7ನೇ ತರಗತಿಯ ಜಿ.ಇ. ರೋಹಿತ್ ್ಸೆನ್ಸಾರ್ ಹೌಸ್) ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಮಾನಸ ಆಯ್ಕೆ
ಶಿವಮೊಗ್ಗ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಶ್ರಯದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸೂಗೂರು ಶ್ರೀ ತುಂಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಹಾಗೂ ತಾಲೂಕಿನ ಹೊಸಳ್ಳಿ ಗ್ರಾಮದ ಎಂ.ಎನ್. ಲೋಕೇಶಪ್ಪ ಅವರ ಪುತ್ರಿ ಎಂ.ಎಲ್. ಮಾನಸ 2012-13ನೇ ಸಾಲಿನ ಇನ್‌ಸ್ಪೈರ್ ಅವಾರ್ಡ್‌ನಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಡಾ. ಪದ್ಮನಾಭ ಉಡುಪರಿಗೆ ಪ್ರಶಸ್ತಿ
ಶಿವಮೊಗ್ಗ: ತಮಿಳುನಾಡಿನ ಶ್ರೀ ಚಿನ್ನಪ್ಪ ಭಾರತಿ ಟ್ರಸ್ಟ್ ಅನುವಾದಕ್ಕಾಗಿ ನೀಡಲಾಗುವ 2013 ರ ಪ್ರಶಸ್ತಿಯನ್ನು ನಗರದ ಲೇಖಕ ಮತ್ತು ವಕೀಲ ಡಾ. ಪದ್ಮನಾಭ ಉಡುಪ ಅವರಿಗೆ ನೀಡಿದೆ. ಒಮ್ಮೆ ಒಂದು ಭಾಷೆಗೆ ಮಾತ್ರ ನೀಡಲಾಗುವ ಪ್ರಶಸ್ತಿಯನ್ನು ಈ ಬಾರಿ ಕನ್ನಡಕ್ಕಾಗಿ ನೀಡಿರುವುದು ವಿಶೇಷ. ಪ್ರಶಸ್ತಿಯು ಹತ್ತು ಸಾವಿರ ರುಪಾಯಿ, ಪದಕ ಮತ್ತು ಶಾಲು ಸಹಿತವಾದ ಗೌರವದೊಂದಿಗೆ ಅಕ್ಟೋಬರ್ 2ರಂದು ನೀಡಲಾಗುವುದು. ತಮಿಳಿನ ನಾಲ್ಕು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವುದಕ್ಕೆ ಈ ಪ್ರಶಸ್ತಿ ಲಭಿಸಿದ್ದು, ಇವರಿಗೆ ಸಹ್ಯಾದ್ರಿ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎನ್. ಸುಂದರರಾಜ್ ಅಭಿನಂದನೆ ಸಲ್ಲಿಸಿದ್ದಾರೆ.
ಸರ್ಕಾರಕ್ಕೆ ಮನವಿ
ಶಿವಮೊಗ್ಗ: ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ಈ ಬಾರಿಯ ಮಲೆನಾಡು ಭಾಗದಲ್ಲಿನ ಅಡಕೆ ತೋಟಗಳಿಗೆ ಕೋಳೆರೋಗ ಭಾಧೆ ಕಾಣಿಸಿಕೊಂಡಿದ್ದು, ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರಿಂದ ಸರ್ಕಾರ ಕೂಡಲೇ ಅಡಕೆ ಬೆಳೆಗಾರರ ರಕ್ಷಣೆಗೆ ಧಾಮಿಸಬೇಕು ಎಂದು ಮಾಮ್‌ಕೋಸ್‌ನ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಶೇಷ ಅಲಂಕಾರ
ಶಿವಮೊಗ್ಗ: ವೆಂಕಟೇಶ್ವರನಗರದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರಾವಣ ಶನಿವಾರದಂದು ಶ್ರೀ ಸ್ವಾಮಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅರ್ಚಕ ವೃಂದ ತಿಳಿಸಿದೆ. ವಿವರಗಳಿಗಾಗಿ- 9379268087.
ಇಂದು ಕಾರ್ಯಕ್ರಮ
ಶಿವಮೊಗ್ಗ: ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ಆ.10ರಂದು ಸಂಜೆ 6ಕ್ಕೆ ರವಿಂದ್ರ ನಗರದ ಶ್ರೀ ಪ್ರಸನ್ನಗಣಪತಿ ದೇವಾಲಯದಲ್ಲಿ ಸನ್ಮಾನ ಸಮಾರಂಭ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದೆ. ಕನಕ ವಿದ್ಯಾಸಂಸ್ಥೆ ಸಂಸ್ಥಾಪಕ ಉಪಾಧ್ಯಕ್ಷ ಕೆ. ದೇವೇಂದ್ರಪ್ಪ ಪಾಲ್ಗೊಳ್ಳಲಿದ್ದು, ಸಂಗೀತ ಕಲಾವಿದೆ ಲಲಿತ ಬಸಪ್ಪ ಅವರನ್ನು ಸನ್ಮಾನಿಸಲಾಗುವುದು. ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ಅಧ್ಯಕ್ಷತೆ ವಹಿಸುವರು.
ವಿಚಾರ ಸಂಕಿರಣ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಮತ್ತು ವಕೀಲರ ಸಂಘ ಆಶ್ರಯದಲ್ಲಿ ಆ.13ರಂದು ಸಂಜೆ 6 ಗಂಟೆಗೆ ವಕೀಲರ ಭವನದಲ್ಲಿ ಜಾಗತೀಕರಣ ಮತ್ತು ಸ್ವಾತಂತ್ರ್ಯ ವಿಚಾರ ಸಂಕಿರಣ ಏರ್ಪಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಾಗತೀಕರಣ- ಭೂಮಿ- ಉದ್ಯೋಗ, ಆತಂಕ ಕುರಿತು ಮಾತನಾಡುವರು. ಕಡೂರು ಶಾಸಕ ವೈ.ಎಸ್.ವಿ. ದತ್ತ ಅವರು ಜಾಗತೀಕರಣ-ಸಾಮಾಜಿಕ ನ್ಯಾಯ, ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪಂಗಡ ಜೀವ ವಿಮಾ ನೌಕರರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಜಾಗತೀಕರಣ- ಶಿಕ್ಷಣ- ತ್ರಿಭಾಷಾ ಸೂತ್ರ, ವಕೀಲ ಕೆ. ದಿವಾಕರ್ ಅವರು ಉಚ್ಛನ್ಯಾಯಲಯದಲ್ಲಿ ಕನ್ನಡ ಬಳಕೆ ವಿಷಯ ಕುರಿತು ಮಾತನಾಡುವರು. ಮುಖ್ಯ ಅತಿಥಿಯಾಗಿ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಕೀಲರ ಸಂಘದ ಅಧ್ಯಕ್ಷ ಅಶೋಕ ಭಟ್ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement