ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕನಿಷ್ಠ ವೇತನಕ್ಕೆ ದಸಂಸ ಒತ್ತಾಯ

Vishwanath S
Updated On : 11 Aug 2013, 12:25 pm

ಕ.ಪ್ರ.ವಾರ್ತೆ  ,  ಸೊರಬ  ,   ಆ.10
ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ನೌಕರರಿಗೆ ಸರ್ಕಾರ ಕನಿಷ್ಠ ವೇತನ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಒತ್ತಾಯಿಸಿದೆ.
ಅಕ್ಷರ ದಾಸೋಹ ಯೋಜನೆಯಡಿ ಸಾವಿರಾರು ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ದಲಿತ, ಸಂತ್ರಸ್ತ, ವಿಧವಾ, ಗ್ರಾಮೀಣ ಪ್ರದೇಶದ ಮಹಿಳೆಯರು ಈ ಯೋಜನೆಯಡಿ ಖಾಸಗಿ ಸಂಸ್ಥೆಯವರು ನೀಡುವ ಅತ್ಯಲ್ಪ ಮೊತ್ತಕ್ಕೆ ಸೇವೆ ಗೈಯುತ್ತಿದ್ದಾರೆ. ಕಾರ್ಯ ನಿರ್ವಹಿಸುವಾಗ ಆಗುವ ಅವಘಡಗಳಿಗೆ ಅವರು ಸೂಕ್ತ ಭದ್ರತೆ ಇಲ್ಲದೆ ಆತಂಕದಲ್ಲಿ ಬದುಕುವಂತಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು, ನಿಗಧಿ ಪಡಿಸಿದ ಕನಿಷ್ಠ ವೇತನ ವ್ಯವಸ್ಥೆಯನ್ನು ಕೂಡಲೆ ಜಾರಿಗೊಳಿಸಬೇಕಿದೆ ಎಂದು ಆಗ್ರಹಿಸಿರುವ ಸಮಿತಿ, ಎಲ್ಲ ಜಾತಿ, ವರ್ಗದವರು ಕೂಡಿ ಊಟ ಮಾಡುವ ಈ ಯೋಜನೆ ಸಮಾಜದಲ್ಲಿ ಸಮಾನತೆಯನ್ನು ದೊರಕಿಸುವಲ್ಲಿ ಉತ್ತಮ ಪರಿಕಲ್ಪನೆ, ಇಂತಹ ಯೋಜನೆ ಸದುಪಯೋಗ, ಸಾರ್ಥಕವಾಗಬೇಕಿದ್ದಲ್ಲಿ ಅಡುಗೆಯವರ ಯೋಗಕ್ಷೇವು ಅತಿಮುಖ್ಯವಾಗಿದೆ ಎಂದಿದ್ದಾರೆ.
ಬಿ. ಬಂಗಾರಪ್ಪ ನಿಟ್ಟಕ್ಕಿ, ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ್ ಪ್ರಕಟಣೆಯಲ್ಲಿ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement