ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿ

Vishwanath S
Updated On : 11 Aug 2013, 12:25 pm

ಶಿವಮೊಗ್ಗ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಕ್ರೀಡಾ ಇಲಾಖೆ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೌಢಶಾಲಾ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಚುಂಚಾದ್ರಿ ಕಪ್‌ನ ಮೊದಲ ದಿನವಾದ ಶನಿವಾರ ನಡೆದ ಪಂದ್ಯಾವಳಿಯಲ್ಲಿ ನಗರದ ವಿವಿಧ ಪ್ರೌಢಶಾಲೆಗಳು ಗೆಲ್ಲುವು ಸಾಧಿಸಿವೆ.
ಬಾಲಕರ ವಿಭಾಗ: ನಗರದ ಸೆಕ್ರೆಡ್ ಆರ್ಟ್ ಹಿರಿಯ ಶಾಲೆ ಹಾಗೂ ನ್ಯಾಷನಲಲ್ಪಬ್ಲಿಕಕ್ಹಿರಿಯ ಶಾಲೆ ನಡುವೆ ನಡೆದ ಪಂದ್ಯದಲ್ಲಿ ಸೆಕ್ರೆಡ್ ಆರ್ಟ್ ಹಿರಿಯ ಶಾಲೆ 2-0 ಅಂತರದಿಂದ ಜಯಗಳಿಸಿದೆ. ಅದೇ ರೀತಿ ಬಿ.ಎಚ್. ರಸ್ತೆಯ ಸರ್ಕಾರಿ ಹಿರಿಯ ಶಾಲೆ ಮತ್ತು ಎಜುಕೇರ್ ಹಿರಿಯ ಶಾಲೆ ನಡುವಿನ ಪಂದ್ಯದಲ್ಲಿ ಸರ್ಕಾರಿ ಹಿರಿಯ ಶಾಲೆ 2-0 ಅಂತರದಲ್ಲಿ ಗೆಲ್ಲುವು ಸಾಧಿಸಿದೆ.
ಇಂಡಿಯನ್ ಹಿರಿಯ ಶಾಲೆ ಮತ್ತು ರಾಮಕೃಷ್ಣ ಹಿರಿಯ ಶಾಲೆ ನಡುವಿನ ಪಂದ್ಯದಲ್ಲಿ ರಾಮಕೃಷ್ಣ ಹಿರಿಯ ಶಾಲೆ 2-0 ಅಂತರದಿಂದ, ನ್ಯಾಷನಲಲ್ಹಿರಿಯ ಶಾಲೆ ಮತ್ತು ಅಯ್ಯಪ್ಪ ಹಿರಿಯ ಶಾಲೆ ನಡುವಿನ ಪಂದ್ಯದಲ್ಲಿ 2-0 ಅಂತರದಲ್ಲಿ ನ್ಯಾಷನಲ್ ಹಿರಿಯ ಶಾಲೆ ಹಾಗೂ ಸಾಂದೀಪಿನಿ ಹಿರಿಯ ಶಾಲೆ ಮತ್ತು ಭದ್ರಾವತಿಯ ಎಸ್‌ಎವಿ ಹಿರಿಯ ಶಾಲೆಯ ಪಂದ್ಯದಲ್ಲಿ 2-0 ಅಂತರದಲ್ಲಿ ಸಾಂದೀಪಿನಿ ಹಿರಿಯ ಶಾಲೆ, ಗ್ಲೋಬಲ್ ಹಿರಿಯ ಶಾಲೆ ಮತ್ತು ಕೇಂಬ್ರಿಡ್ಜ್ ನಡುವಿನ ಪಂದ್ಯದಲ್ಲಿ ಕೇಂಬ್ರಿಡ್ಜ್ 2-0 ಅಂತರದಲ್ಲಿ ಜಯಗಳಿಸಿವೆ.
ಬಾಲಕಿಯರ ವಿಭಾಗ: ಬಾಲಕಿಯರ ವಿಭಾಗದಲ್ಲಿ ಒಂದು ಪಂದ್ಯ ನಡೆದಿದ್ದು, ಸಾಂಧಿಪಿನಿ ಹಿರಿಯ ಶಾಲೆ ಮತ್ತು ಆಕ್ಸ್‌ಫರ್ಡ್ ಹಿರಿಯ ಶಾಲೆ ನಡುವಿನ ಪಂದ್ಯಾವಳಿಯಲ್ಲಿ ಅಕ್ಸ್‌ಫರ್ಡ್ ಶಾಲೆ 2-0 ಅಂತರದಿಂದ ಜಯ ಸಾಧಿಸಿದೆ.
ವೇದಿಕೆ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ರಾಜಶೇಖರ್ಸುಭಾಷ್), ಪಿ.ವಿ. ವಿಶ್ವನಾಥ್, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಯುನೈಟೆಡ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಮತ್ತಿತರರು ಪಾಲ್ಗೊಂಡಿದ್ದರು.
ಪಾಲಿಟೆಕ್ನಿಕ್: ಅರ್ಜಿ ಆಹ್ವಾನ
ಸೊರಬ: ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಖಾಲಿ ಇರುವ ಕೋರ್ಸ್‌ಗಳ ಸೀಟುಗಳನ್ನು ಆಫ್‌ನೈನ್ ಮೂಲಕ ಭರ್ತಿ ಮಾಡಲು ಎಸ್‌ಎಸ್‌ಎಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆದು ಪ್ರವೇಶ ನೀಡಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸೊರಬ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಖಾಲಿ ಇರುವ ಕಂಪ್ಯೂಟರ್‌ಸೈನ್ಸ್ ಮತ್ತು ಕಮರ್ಶಿಯಲ್ ಪ್ರಾಕ್ಟೀಸ್ ಕೋರ್ಸುಗಳಿಗೆ ಅರ್ಜಿ ಕರೆದಿದೆ.
ಅರ್ಜಿ ಪಡೆಯಲು ಮತ್ತು ಭರ್ತಿ ಮಾಡಿದ ಅರ್ಜಿ ಸಲ್ಲಿಸಲು 13-08-13 ಮಧ್ಯಾಹ್ನ 2ರ ತನಕ ಅವಕಾಶವಿದೆ. 14-08-13ರಂದು ಬೆಳಿಗ್ಗೆ 9 ಗಂಟೆಗೆ ಮೂಲ ದಾಖಲೆಪ್ರವೇಶ ಪತ್ರದೊಂದಿದೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ಕಾಲೇಜಿನಲ್ಲಿ ಅಥವಾ ಗಿಗಿಗಿ.ಉಖಊಿ.ಓಆಖ.ಃಐಈ.ಐಃ, ಗಿಗಿಗಿ.ಉಖಊಿಓಆಖಃಆಖಿಆಓಆ.ಐಃ, ಗಿಗಿಗಿ.ಉಐಕಿಔಕಂಆ ಆಉಂಐಖಖಐಕಃ.ಐಃ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗರ ಪಂಚಮಿ: ಹಾಲು ವಿತರಣೆ
ಕ.ಪ್ರ.ವಾರ್ತೆ  ,  ಶಿವಮೊಗ್ಗ  ,   ಆ.10
ನಾಗರಪಂಚಮಿ ಹಬ್ಬದ ಅಂಗವಾಗಿ ಶನಿವಾರ ನಗರದ ಬಸವಕೇಂದ್ರದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಬಸವಕೇಂದ್ರದ ಬಸವಮರುಳಸಿದ್ದ ಸ್ವಾಮೀಜಿಗಳು ಬಡ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಹುತ್ತಕ್ಕೆ ಅಥವಾ ಕಲ್ಲಿನ ನಾಗರಕ್ಕೆ ಹಾಲೆರೆದರೆ ಯಾವುದೇ ಪ್ರಯೋಜನವಿಲ್ಲ. ರ್ವೈಜನಿಕವಾಗಿ ನಾಗರಹಾವು ಸೇರಿದಂತೆ ಯಾವುದೇ ಹಾವು ಹಾಲು ಕಡಿಯುವುದಿಲ್ಲ. ಹಾಲು ಹಾವಿನ ಆಹಾರವಲ್ಲ ಎಂದು ತಿಳಿಸಿದರು.
ಈ ವೇಳೆ ಕೇಂದ್ರದ ಅಧ್ಯಕ್ಷ ಬೆನಕಪ್ಪ, ಕತ್ತಿಗೆ ಚನ್ನಪ್ಪ, ಮೋಹನ್, ಚಂದ್ರಪ್ಪ ಮತ್ತಿತರರು ಇದ್ದರು.
ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ
ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಕಮಿಟಿ ಕಾರ್ಯದರ್ಶಿ ದತ್ತಾತ್ರಿ ತಿಳಿಸಿದ್ದಾರೆ.
ಇಂದು ವಿಶೇಷಾಂಕ ಬಿಡುಗಡೆ
ಶಿವಮೊಗ್ಗ: ಖಾಸಗಿ ಪ್ರಸಾರದ ಹೊಸ ಮನುಷ್ಯ ಸಮಾಜವಾದಿ ಮಾಸಿಕದ 2013ರ ವಾರ್ಷಿಕ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮವು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯುವುದು. ವಿಶೇಷಾಂಕ ಕುರಿತು ಲೇಖಕಿ ಸಬಿತಾ ಬನ್ನಾಡಿ ಅವರು ಮಾತನಾಡಲಿದ್ದು, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ರೈತ ನಾಯಕ ಕಡಿದಾಳು ಶಾಮಣ್ಣ ಅವರಿಂದ ಕೊಳಲು ವಾದನ ಕಾರ್ಯಕ್ರಮವಿದೆ.
25ರಂದು ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆ.25ರಂದು ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ ಪರಿಷತ್‌ನ ಸರ್ವ ಸದಸ್ಯರ ಸಭೆ ಏರ್ಪಡಿಸಿದೆ. ಸಭೆಗೆ ಹಾಜರಾಗುವ ಸದಸ್ಯರು ತಮ್ಮ ಹೆಸರನ್ನು ಪರಿಷತ್‌ನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಪರಿಷತ್‌ನ ಅಧ್ಯಕ್ಷ ಕತ್ತಿಗೆ ಚನ್ನಪ್ಪ ತಿಳಿಸಿದ್ದಾರೆ. ವಿವರಗಳಿಗಾಗಿ 9844572572.
ಶ್ರಾವಣ ಚಿಂತನ
ಶಿವಮೊಗ್ಗ: ಶ್ರೀ ಬೆಕ್ಕಿನಕಲ್ಮಠ, ಬಸವಕೇಂದ್ರ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆ.12ರಂದು ಸಂಜೆ 6.30ಕ್ಕೆ ವೆಂಕಟೇಶನಗರದ ಬಸವಕೇಂದ್ರದಲ್ಲಿ ಶ್ರಾವಣ ಚಿಂತನ ಹಾಗೂ ಗಮಕ ಶ್ರಾವಣ ಏರ್ಪಡಿಸಲಾಗಿದೆ. ಶ್ರೀಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯದಲ್ಲಿ 5ನೇ ಶೂನ್ಯ ಸಂಪಾದನೆ ಸಂಪಾದಕ ಡಾ. ಜಿ.ವಿ. ಜಯರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕತ್ತಿಗೆ ಚನ್ನಪ್ಪ, ನ್ಯಾಯವಾದಿ ಎನ್. ತಿಮ್ಮಪ್ಪ, ಸಹ್ಯಾದ್ರಿ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎನ್. ಸುಂದರಾಜ್ ಪಾಲ್ಗೊಳ್ಳುವರು. ಇದೇ ವೇಳೆ ಹಿಂದೂಸ್ತಾನಿ ಗಾಯಕ ಗಂಗಾಧರ ಶಾಸ್ತ್ರೀ ಹಾಗೂ ಬಸವಕೇಂದ್ರದ ಅಕ್ಕನ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಗುರುಮೂರ್ತಿಗೆ 50
ಶಿವಮೊಗ್ಗ: ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಅವರ 50ನೇ ಹುಟ್ಟುಹಬ್ಬ ನಿಮಿತ್ತ ಆ.12ರಂದು ನಗರದ ಹೋಟೆಲ್ ಮಥುರಾ ಪ್ಯಾರಡೈಸ್‌ನಲ್ಲಿ ಉಚಿತ ರಕ್ತ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಶಾಸಕ ಕೆ.ಬಿ. ಪ್ರಸನ್ನಕುಮಾರ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಎಂ. ಗುರುಮೂರ್ತಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಶಿವಮೊಗ್ಗ: ನಿದಿಗೆಯ ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಶ್ರಯದಲ್ಲಿ ಶನಿವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬದಲಾಗುತ್ತಿರುವ ಆಹಾರ ಪದ್ಧತಿಯಿಂದ ಸಾಕಷ್ಟು ಜನ ಕಾಯಿಲೆಗಳಿಗೆ ಗರಿಯಾಗುತ್ತಿದ್ದಾರೆ. ಹಿಂದಿನ ಆಹಾರ ಪದ್ಧತಿ ಕಡಿಮೆ ಆಗಿರುವುದೇ ಇದಕ್ಕೆ ಕಾರಣ. ನಮ್ಮ ಹಿರಿಯರು ಸೇವಿಸುತ್ತಿದ್ದ ಆಹಾರ ಅತ್ಯಂತ ಪೌಷ್ಟಿಕವಾಗಿರುತ್ತಿತ್ತು. ಅದನ್ನು ಸೇವಿಸಿದ ಮನುಷ್ಯ ಬಹಳಷ್ಟು ವರ್ಷಗಳ ಕಾಲ ಯಾವುದೇ ಕಾಯಿಗಳಿಲ್ಲದೇ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ಆದರೆ, ಇಂದು ಕ್ರಮಬದ್ಧವಾದ ಆಹಾರ ಕ್ರಮದಿಂದ ಜನರು ಬಹುಬೇಗ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ವಿಷಾದಿಸಿದರು. ನೂರಾರು ಸಾರ್ವಜನಿಕರು ಶಿಬಿರದ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಹಿರೇಮಠ್, ಉಪಪ್ರಾಂಶುಪಾಲ ಡಾ. ಪಂಕಜ್ ಪ್ರಸಾದ್ ಮತ್ತಿತರರು ಇದ್ದರು.
18ಕ್ಕೆಬಾಡಿ ಬಿಲ್ಡಿಂಗ್ ಸ್ಪರ್ಧೆ
ಶಿವಮೊಗ್ಗ: ಜಿಲ್ಲಾ ಬಾಡಿಬಿಲ್ಡಿಂಗ್ ಅಂಡ್ ಫಿಟ್‌ನೆಸ್ ಅಸೋಸಿಯೇಷನ್ ಆ.18ರಂದು ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಆಸಕ್ತರು ಪಾಲ್ಗೊಳ್ಳಬಹುದು ಎಂದು ಅಸೋಸಿಯೇಷನ್ ಕಾರ್ಯದರ್ಶಿ ಆರ್. ರಘುನಾಥ್ ತಿಳಿಸಿದ್ದಾರೆ. ವಿವರಗಳಿಗಾಗಿ- 9980317086.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement