ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೋಗ್- ಕಾರ್ಗಲ್ ಪ.ಪಂ.ಗೆ ಕಾಗೋಡು ಭೇಟಿ

Vishwanath S
Updated On : 11 Aug 2013, 12:24 pm

ಕ.ಪ್ರ.ವಾರ್ತೆ  ,  ಜೋಗ್ ಫಾಲ್ಸ್   ,   ಆ.10
ಇಲ್ಲಿನ ಜೋಗ್- ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ 2012-13ನೇ ಸಾಲಿನ ಕ್ರಿಯಾ ಯೋಜನೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 2010ರಿಂದ ಈವರೆಗಿನ ಶೇ.22.75 ಅನುದಾನದ ಫಲಾನುಭವಿಗಳ ಸಮಗ್ರ ವರದಿಯನ್ನು ನೀಡುವಂತೆ ಆದೇಶಿಸಿದರು. ಪಟ್ಟಣ ಪಂಚಾಯ್ತಿಯ ಅಭಿವೃದ್ಧಿ ಬಗ್ಗೆ ಉಪವಿಭಾಗಾಧಿಕಾರಿಗಳೊಂದಿಗೆ ಸಭೆ ನಡೆಸುವ ಬಗ್ಗೆ ಭರವಸೆಯನ್ನೂ ನೀಡಿದರು.
ಜೋಗ- ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅರಣ್ಯ ಭೂಮಿ ವಿವಾದ ಜಂಟಿ ಸರ್ವೇ ಮಾಡಿಸಿ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಾಗಿ ತಿಳಿಸಿದ ಅವರು, ಶ್ರೀಪುರ ಪ್ರದೇಶದಲ್ಲಿ ಹರಾಜಿನ ಮೂಲಕ ನಿವೇಶನ ಪಡೆದ ಜನರಿಗೆ ಪಟ್ಟಣ ಪಂಚಾಯ್ತಿಯಲ್ಲಿ ಖಾತೆ ನೀಡುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪ.ಪಂ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ, ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯರಾದ ರವಿ ಲಿಂಗನಮಕ್ಕಿ, ಶ್ರೀಲತಾ ಸತ್ಯನ್, ಮುಖ್ಯಾಧಿಕಾರಿ ಎಂ.ಜಿ. ರಮೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement