ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 12
ಪ್ರಸಕ್ತ ರೇಲ್ವೆ ಬಜೆಟ್ನಲ್ಲಿ ಅನುಮೋದನೆ ಪಡೆದ ಬೆಂಗಳೂರು- ಮಾರಿಕುಪ್ಪಂ- ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾರಿಕುಪ್ಪಂ ರೇಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.
ವಾರದಲ್ಲಿ 6 ದಿನ ಬೆಂಗಳೂರು ಮತ್ತು ಮಾರಿಕುಪ್ಪಂ ಮಧ್ಯೆ ಈ ಪ್ಯಾಸೆಂಜರ್ ರೈಲು ಸಂಚರಿಸಲಿದ್ದು, ಪ್ರತಿದಿನ ರಾತ್ರಿ ಬೆಂಗಳೂರನ್ನು 9:15ಕ್ಕೆ ಬಿಡಲಿದ್ದು, ಅದೇ ರೀತಿ ಮಾರಿಕುಪ್ಪಂ ರೇಲ್ವೆ ನಿಲ್ದಾಣದಿಂದ ರಾತ್ರಿ 10:30ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರು ಮಾರಿಕುಪ್ಪಂ ಪ್ಯಾಸೆಂಜರ್ ರೇಲ್ವೆಯ ಪ್ರಥಮ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಕೇಂದ್ರ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಸಚಿವ ಕೆ.ಎಚ್. ಮುನಿಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ರಮೇಶಕುಮಾರ್, ಶಾಸಕಿ ವೈ. ರಾಮಕ್ಕ, ಕೆ.ಎಂ. ನಾರಾಯಣಸ್ವಾಮಿ, ಆರ್. ವರ್ತೂರು ಪ್ರಕಾಶ ಸೇರಿದಂತೆ ಇನ್ನಿತರರು ಇದ್ದರು. ಶನಿವಾರ ಬೆಂಗಳೂರಿನಿಂದ ಮತ್ತು ಭಾನುವಾರ ಮಾರಿಕುಪ್ಪಂನಿಂದ ಈ ಪ್ಯಾಸೆಂಜರ್ ರೈಲು ಸಂಚರಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.