ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ರಾತ್ರಿ 'ಸಮನ್ವಯ' ಸ್ವದೇಶಿ ಮಂತ್ರ

Lingaraj Badiger
Updated On : 14 Aug 2013, 10:50 am

ಕ.ಪ್ರ.ವಾರ್ತೆ  ಶಿವಮಮೊಗ್ಗ  ಆ.13
ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ಬಂದಿರುವ ಸಮನ್ವಯ ಬಳಗವು ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ವೇದಿಕೆ ಸಿದ್ದಮಾಡಿದೆ.
ನಗರದಲ್ಲಿ ಹಲವು ವರ್ಷಗಳಿಂದ ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಂಸ್ಥೆ ಸಮನ್ವಯ ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ವಿಶೇಷವಾಗಿ ಯುವಜನರಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ.
 ಸ್ವಾತಂತ್ರ್ಯೋತ್ಸವ ನಡೆಯುವ ನೆಹರೂ ಕ್ರೀಡಾಂಗಣದ ಹೊರಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ಯುವಕ ಯುವತಿಯರು ಏಕ ಕಂಠದಲ್ಲಿ ರಾಷ್ಟ್ರ ಭಕ್ತಿಗೀತೆ ಹಾಡುವ ಕಾರ್ಯಕ್ರಮವನ್ನು ಕಳೆದ ವರ್ಷ ಆಯೋಜಿಸಿತ್ತು. ಈ ವರ್ಷ ಇಂತಹ ವಿಭಿನ್ನ ಸೃಜನಶೀಲ ಕಾರ್ಯಕ್ರಮ ಆಯೋಜಿಸಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವ ವಿಶೇಷವೇ ಸ್ವದೇಶಿ ಮಂತ್ರ.
ಇಂದು ರಾತ್ರಿ ಸಮೂಹ ಗಾಯನ: 14ರಂದು ರಾತ್ರಿ 10 ಗಂಟೆಗೆ ಗೋಪಿ ವೃತ್ತದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ರಾಷ್ಟ್ರಭಕ್ತಿ ಉದ್ದೀಪಿಸುವ ಗೀತೆಗಳ ಸಮೂಹ ಗಾಯನ, ಇಂಥದ್ದೇ ಗೀತೆಗಳಿಗೆ ಸಮೂಹ ನೃತ್ಯ ಪ್ರದರ್ಶನ ನಡೆಯಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯವಾದ ಮಧ್ಯಾತ್ರಿ 12ಕ್ಕೆ ಸರಿಯಾಗಿ ಆಕರ್ಷಕ ಸಿಡಿಮದ್ದು ಪ್ರದರ್ಶನ ಹಾಗೂ ಜನಪದ ವಾದ್ಯಗಳ ವಾದನ ನಡೆಯಲಿದೆ.
ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸುವುದು ಮತ್ತೊಂದು ವಿಶೇಷವಾಗಿರುತ್ತದೆ.
 ನಗರದ ಹತ್ತಕ್ಕೂ ಹೆಚ್ಚು ಪದವಿ ಕಾಲೇಜುಗಳ ಸುಮಾರು 80 ವಿದ್ಯಾರ್ಥಿಗಳ ಸಾಮೂಹಿಕ ಸೃಜನಶೀಲ ಕೃತಿ ಈ ಸ್ವದೇಶಿ ಮಂತ್ರ. ಯುವ ಸೌರಭ, ಸ್ಟೈಲ್ ಡ್ಯಾನ್ಸ್ ಗ್ರೂಪ್, ಮಲ್ನಾಡ್ ಓಪನ್ ಗ್ರೂಪ್, ಅಡಕೆ ಮಂಡಿ ಕಾರ್ಮಿಕರ ಸಂಘ, ಪಾಲ್ಚಂದ್ರ ಡ್ಯಾನ್ಸ್ ಗ್ರೂಪ್, ನಿರಂತರ ಸಂಸ್ಥೆ ಇನ್ನಿತರ ಸಂಘಟನೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಿವೆ ಎಂದು ಸಮನ್ವಯ ತಿಳಿಸಿದೆ. ನಗರದಲ್ಲಿ ನಡೆಯುತ್ತಿರುವ ಈ ಅಪರೂಪದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ನಗರದ ನಾಗರಿಕರಿಗೆ ಸಮನ್ವಯ ಆಹ್ವಾನ ನೀಡಿದೆ.
ಸ್ವಾತಂತ್ರ್ಯ ಹೋರಾಟಗಾರ ಎಸ್.ಎಲ್. ಶ್ರೀರಂಗರಾಜು ಕಾರ್ಯಕ್ರಮ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಉದ್ಯಮಿ ಎಸ್. ರುದ್ರೇಗೌಡ ಉಪಸ್ಥಿತರಿರುವರು. ಮುಖ್ಯ ಅತಿಥಿಯಾಗಿ ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಪಾಲ್ಗೊಳ್ಳಲಿದ್ದು, ಸಮನ್ವಯ ಸಲಹಾ ಸಮಿತಿ ಸದಸ್ಯರಾದ ಸಂಧ್ಯಾ ಕಾವೇರಿ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement