ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ವಾತಂತ್ರ್ಯ ಹೋರಾಟಗಾರನ ಕನಸು ನನಸು

Lingaraj Badiger
Updated On : 14 Aug 2013, 10:51 am

ಕ.ಪ್ರ.ವಾರ್ತೆ  ಆಯನೂರು  ಆ.13
ಶಿವಮೊಗ್ಗ ತಾಲೂಕಿನ ಆಯನೂರಿನಿಂದ 6 ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಗ್ರಾಮ ಹಾರನಹಳ್ಳಿಯಲ್ಲಿ ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ.
ಗ್ರಾಮದ ದೇಶ ಪ್ರೇಮಿಗಳೆಲ್ಲಾ ಸೇರಿ ರಾಷ್ಟ್ರಪಿತ ಗಾಂಧೀಜಿಯವರ ಪುತ್ಥಳಿಯನ್ನು ಅನಾವರಣಗೊಳಿಸಲು ನಿರ್ಧರಿಸಿದ್ದಾರೆ. ವಿಶೇಷವೆಂದರೆ ಈ ಪುತ್ಥಳಿ ಸ್ಥಾಪನೆಗೆ ಕಾರಣವಾಗುತ್ತಿರುವವರು ಊರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಾರೆ ಕಾರ್ಮಿಕರು, ಬಡಗಿ ಕೆಲಸಗಾರರು. ಇವರ ಜೊತೆಗೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಕೈಜೋಡಿಸಿದ್ದಾರೆ.
ವಿಶೇಷ ಪೂಜೆ: ಸ್ವಾತಂತ್ರ್ಯ ಹೋರಾಟಗಾರ ಲಕ್ಷ್ಮಣರಾವ್ ಎಂಬುವರು ಈ ಗ್ರಾಮದ ನಿವಾಸಿ. ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಗಾಂಧಿ ಮೂರ್ತಿಯನ್ನು ತಮ್ಮ ಮನೆಯಿಂದ ತಂದು ಬಸ್ ನಿಲ್ದಾಣದಲ್ಲಿ ವಿಶೇಷವಾಗಿ ಅಲಂಕರಿಸಿ ಪೂಜಿಸಿ ಸಂಜೆ ಮನೆಗೆ ಒಯ್ಯುತ್ತಿದ್ದರು. ಗಾಂಧಿವಾದವನ್ನು ಗ್ರಾಮದಲ್ಲಿ ಬಿತ್ತುವುದು ಹಾಗೂ ದೇಶದ ಬಗ್ಗೆ ಸ್ವಾಭಿಮಾನ ಹೆಚ್ಚಿಸುವುದು ಅವರ ಉದ್ದೇಶ. ಈ ಕಾರಣಕ್ಕಾಗಿಯೇ ಅವರು ಹಲವು ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬಂದಿದ್ದರು.
ಆದರೆ, 5 ತಿಂಗಳ ಹಿಂದಷ್ಟೇ ಅವರು ಮೃತರಾದರು. ಇದೀಗ ಅವರ ನೆನಪಿನಲ್ಲಿ ಗ್ರಾಮದವರೆಲ್ಲಾ ಸೇರಿ ಗಾಂಧಿ ಪುತ್ಥಳಿಯನ್ನು ಸ್ಥಾಪಿಸಲು ನಿರ್ಧರಿಸಿದರು. ಗಾಂಧಿ ಪುತ್ಥಳಿ ಸ್ಥಾಪಿಸಬೇಕೆಂಬುದು ಲಕ್ಷ್ಮಣರಾವ್ ಅವರ ಕನಸೂ ಆಗಿತ್ತು.
ಲಕ್ಷ್ಮಣರಾವ್ ಅವರನ್ನು ಬಾಲಕರಾಗಿದ್ದಾಗಿನಿಂದ ಅನುಸರಿಸುತ್ತಿದ್ದ ಅದೇ ಗ್ರಾಮದ ಜಯಕರ್ನಾಟಕ ಸಂಘಟನೆಯ ದಿವಾಕರ ಬಾಬು, ತಾ.ಪಂ. ಮಾಜಿ ಸದಸ್ಯ ರಾಜಾರಾವ್, ಗಾರೆ ಶಿವು, ಗಾರೆ ಅಶೋಕ, ನೀಲಪ್ಪ, ಚಂದ್ರುಶೆಟ್ಟಿ ಮತ್ತಿತತರು ಮುಂದೆ ನಿಂತು ಈಗ ಲಕ್ಷಣರಾವ್ ಕನಸನ್ನು ಅನುಷ್ಠಾನಕ್ಕೆ ತಂದಿದ್ದಾರೆ.
ಐದು ಅಡಿ ಎತ್ತರದ ಗಾಂಧಿ ಪುತ್ಥಳಿಯನ್ನು ಅದೇ ಗ್ರಾಮದ ಕಲಾವಿದ ಲಿಂಗರಾಜ್ ನಿರ್ಮಿಸಿದ್ದಾರೆ.
ದೇಶಭಕ್ತಿಗೆ ಸ್ಥಾಪನೆ: “OÚ«Ú­sÚ®ÚúڒOæQ ಪ್ರತಿಕ್ರಿಯೆ ನೀಡಿದ ಗಾರೆ ಶಿವು ಹಾಗೂ ಚಂದ್ರು ಶೆಟ್ಟಿ, ದೇಶಭಕ್ತಿ ಹಾಗೂ ರಾಷ್ಟ್ರಭಕ್ತಿ ನಶಿಸುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸಬೇಕು ಹಾಗೂ ರಾಷ್ಟ್ರ ನಾಯಕರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಗಾಂಧೀಜಿ ಪುತ್ಥಳಿಯನ್ನು ಗ್ರಾಮದಲ್ಲಿ ಸ್ಥಾಪಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮ ವಿವರ: ಆಗಸ್ಟ್ 14ರಂದು ಗಾಂಧಿ ಪ್ರತಿಮೆಯ ಮೆರವಣಿಗೆ ನಡೆಯಲಿದೆ. 15ರಂದು ಸಭಾ ಕಾರ್ಯಕ್ರಮ ನಡೆಯಲಿದ್ದು, ಹಾರನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ಹನುಮಂತಸ್ವಾಮಿ ಉಪಸ್ಥಿತರಿರಲಿದ್ದು, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕಿ ಶಾರದಾ ಪೂರ್ಯಾನಾಯ್ಕ ಪ್ರತಿಮೆ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಿದ್ದಾರೆ.
ಊರಿನ ಹಿರಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲೂ ಸಹ ಉದ್ದೇಶಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement