ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಪಕ್ಷಭೇದ ಮರೆತು ಅಭಿವೃದ್ಧಿಗೆ ಕೈಜೋಡಿಸಿ'

Vishwanath S
Updated On : 15 Aug 2013, 11:47 am

ಕ.ಪ್ರ.ವಾರ್ತೆ  ಸೊರಬ  ಆ.14 ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷ ರಾಜಕಾರಣವಿರಲಿ, ಜನಪ್ರತಿನಿಧಿ ಆಯ್ಕೆಯ ನಂತರ ಪಕ್ಷಭೇದ ಮರೆತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಮಧುಬಂಗಾರಪ್ಪ ಹೇಳಿದರು.
ತಾಲೂಕು ಹಂಚಿ ಗ್ರಾಮದಲ್ಲಿ ಬುಧವಾರ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಗೆ ಗಮನ: ತಾಲೂಕು ಶಾಸಕನಾಗಿ ನನಗಿರುವಷ್ಟೇ ಜವಾಬ್ಧಾರಿ ಸ್ಥಳೀಯ ಆಡಳಿತದ ಜನಪ್ರತಿನಿಧಿಗಳಿಗೂ ಇರುತ್ತದೆ. ಇಂತಲ್ಲಿ ಬೇರೆಬೇರೆ ಪಕ್ಷಗಳಿಂದ ಆಯ್ಕೆಯಾದವರೂ ಇದ್ದಾರೆ. ಅವರುಗಳು ಸಹಾ ಅಭಿವೃದ್ಧಿ ದೃಷ್ಟಿಯಿರಿಸಿ ಪಕ್ಷ ಮರೆತು ಕೈಜೋಡಿಸಿದಲ್ಲಿ ತಾಲೂಕಿಗೆ ಹಿತವಿದೆ  ಎಂದರು.
ಈ ಮನೋಭಾವವಿದ್ದಲ್ಲಿ ರಾಜ್ಯದ ಆಡಳಿತ ಯಾವ ಪಕ್ಷದ್ದೇ ಆಗಿರಲಿ ನಾನು ತಂದೆ ಬಂಗಾರಪ್ಪ ಅವರ ಆಶೀರ್ವಾದ, ನನ್ನಲ್ಲಿನ ಸ್ಫೂರ್ತಿ, ಇಚ್ಚಾಶಕ್ತಿಯಿಂದ ಉಳಿದೆಲ್ಲ ತಾಲೂಕಿಗಿಂತ ಹೆಚ್ಚಿನ ಅನುದಾನ ತರಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚಿನ ನಿಗಾ: ತಾಲೂಕಿನಲ್ಲಿ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿರುವ ಬಗರ್ ಹುಕುಂ ಸಾಗುವಳಿ ಸಕ್ರಮಾತಿ ಕುರಿತಂತೆ ಹೆಚ್ಚಿನ ನಿಗಾವಹಿಸಿದ್ದು, ಈಗಾಗಲೇ ಕಂದಾಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಈ ನಿಟ್ಟಿನಲ್ಲಿ ಹಿಂದೆ ಸಾಗುವಳಿ ಮಾಡಿರುವ ರೈತರ ಜಮೀನನ್ನು ಉಳಿಸಿಕೊಡುವ ವಿಚಾರದಲ್ಲಿ ನನ್ನ ಸಂಪೂರ್ಣ ಪ್ರಯತ್ನವಿದ್ದು, ಹೊಸದಾಗಿ ಬಗರ್ ಹುಕುಂ ಸಾಗುವಳಿ ಮಾಡಿದವರಿಗೆ ನನ್ನ ಸಹಕಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಗ್ರ ವರದಿ: ಪ್ರಸಕ್ತ ಸಾಲಿನ ಮಳೆಹಾನಿಗೊಳಗಾದ ಸುಮಾರು ರು. 13 ಕೋಟಿ  ಬೆಳೆ, ಆಸ್ತಿಪಾಸ್ತಿಗಳ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಎಂದರು.
ತಾಪಂ ಅಧ್ಯಕ್ಷ ಸದಾನಂದಗೌಡ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಟಿ. ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಪಂ ಸದಸ್ಯ ಬಸವಲಿಂಗಪ್ಪ, ಈರಪ್ಪಗಂಟೇರ, ಗ್ರಾಪಂ ಉಪಾಧ್ಯಕ್ಷೆ ಚಿತ್ರಾ, ಸದಸ್ಯ ಶಿವಾಜಿ ನಾಯ್ಕ, ಮಂಜಪ್ಪ, ಅಣ್ಣಪ್ಪ, ನಾಗಪ್ಪ, ಮಂಜು ಆಚಾರ್, ಚೆನ್ನಬಸಮ್ಮ, ಶಾಂತಮ್ಮ, ರತ್ನಮ್ಮ, ಶಿಲ್ಪಾ, ಲಲಿತಮ್ಮ, ಪ್ರೇಮ, ಇಒ ಮಂಜುಳಾ ದೇವಿ, ಜಿಪಂ ಎಇಇ ತಿಮ್ಮಪ್ಪ, ಜಿ.ವಿ.ಪ್ರಕಾಶ್, ಪಿಡಿಒ ಈಶ್ವರ ಕಾಖಂಡಕಿ, ಕಾಳಿಂಗರಾಜ್, ರುದ್ರಪ್ಪ ಕಡ್ಲೇರಾ, ಕೆ.ಪಿ. ರುದ್ರಗೌಡ, ಸಂತೋಷ್ ಹಂಚಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement