ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯಾರಿಗೆ ಬಂದಿದೆ 47ರ ಸ್ವಾತಂತ್ರ್ಯ?

Vishwanath S
Updated On : 15 Aug 2013, 11:47 am

ಸೊರಬ: ಯಾವ ಪುರುಷಾರ್ಥಕ್ಕಾಗಿ ಸ್ವಾತಂತ್ರ್ಯೋತ್ಸವ ಆಚರಿಸಬೇಕು ಎಂದು ಪ್ರಶ್ನಿಸಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
 ರಾಮರಾಜ್ಯದ ಕನಸಕಟ್ಟಿ ಶಾಂತಿಯಿಂದಲೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧಿ ಕನಸು ನನಸಾಗಿಲ್ಲ, ಇಂದು ಸ್ವಾತಂತ್ರ್ಯ ಎಂಬುದು ಸ್ವೇಚ್ಛೆಗೆ, ಸ್ವಹಿತಕ್ಕೆ, ಜಾತಿ ಹಿತಕ್ಕೆ, ಕಂಡಕಂಡ ಮಹಿಳೆಯರನ್ನು ಭೋಗದ ವಸ್ತುವನ್ನಾಗಿ ಕಾಣುವುದಕ್ಕೆ ಎಂಬಂತಾಗಿದೆ. ಇಷ್ಟೆಲ್ಲ ಅಧ್ವಾನ, ಅಶಾಂತಿ, ಕ್ಷೋಭೆಗಳ ಮೂಟೆಯೊಳಗೆ ಹುಗಿದು ಕುಬ್ಜರಾಗಿರುವಾಗ ತೋರ್ಪಡಿಕೆಗೋಸ್ಕರ ಆಚರಣೆ ಏಕೆ ನಡೆಸಬೇಕು ಎಂದು ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಪ್ರಶ್ನಿಸಿದ್ದಾರೆ.
 ನೆಹರು ಪ್ರಧಾನಿಯಾಗುವುದಕ್ಕೆ ಮುಂಚೆ ಗೋ ಸಂರಕ್ಷಣೆಯೆ ದೇಶದ ಶಕ್ತಿ ಎಂದಿದ್ದರು, ತಾನು ಪ್ರಧಾನಿಯಾದರೆ ಗೋ ಹತ್ಯೆ ನಿಷೇದ ಕಾನೂನಿಗೆ ನನ್ನ ಮೊದಲ ಆಧ್ಯತೆ ಎಂದಿದ್ದರು, ಆದರೆ ಸ್ವಾತಂತ್ರ್ಯ ಕಂಡು 67 ವರ್ಷ ಕಳೆದರೂ ನಿಷೇದದ ಕಾನೂನು ಜಾರಿಯಾಗುವುದಿರಲಿ, ಅದೇ ಒಂದು ಚುನಾವಣೆ ಅಸ್ತ್ರವಾಗಿ ಈಗ ಚಲಾವಣೆಯಾಗಿರುವುದು, ಮಧ್ಯರಾತ್ರಿ ವೇಳೆ ಮಹಿಳೆ ಒಬ್ಬಂಟಿಗಳಾಗಿ ಓಡಾಡುವ ದಿನ ಬಂದಲ್ಲಿ ಸ್ವಾತಂತ್ರ್ಯಕ್ಕೆ ಅರ್ಥವಿದೆ ಎಂದು ಗಾಂಧಿ ಹೇಳಿದ್ದರು, ಆದರೆ ಮಧ್ಯ ರಾತ್ರಿಯಿರಲಿ, ಹಗಲು ಕೂಡ ಆಕೆ ನಿರ್ಭೀತಳಾಗಿ ಓಡಾಡುವ ವಾತಾವರಣ ನಮ್ಮಲಿಲ್ಲ ಹೀಗಿದ್ದು ಏತಕ್ಕಾಗಿ ಸ್ವಾತಂತ್ರ್ಯೋತ್ಸವ ಆಚರಿಸಬೇಕು ಎಂದಿರುವ ಅವರು ಗಡಿಯಲ್ಲಿರುವ ಸೈನಿಕರಿಗೆ ರಕ್ಷಣೆ ದೊರಕುವವರೆಗೆ. ಅನ್ನ ನೀಡುವ ರೈತ ಬೇಡಲಾರದಂತಾದಾಗ, ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದಲ್ಲಿ ಧಕ್ಷತೆ ಕಂಡಾಗ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸೋಣ ಬನ್ನಿ ಎಂದು ಕರೆ ನೀಡಿದ್ದಾರೆ.
 ರಾಷ್ಟ್ರೀಯ ಹಬ್ಬಾಚರಣೆ ದಿನಗಳಲ್ಲಿ ಮಾರುದ್ದದ ಭಾಷಣ ಬಿಗಿಯುವ ನಮ್ಮನ್ನಾಳುವ ಸ್ವಾರ್ಥ ಲಾಲಸೆಯವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೂ ಮಾನವ ಹಕ್ಕುಗಳಿಗೆ ಬೆಲೆಯಿಲ್ಲ, ದೇಶದ ಯುವಕರಿಗೆ ಉಧ್ಯೋಗವಿಲ್ಲ, ಶೋಷಣೆ, ಅತ್ಯಾಚಾರ ನಿಲ್ಲುವುದಿಲ್ಲ, ನೈಸರ್ಗಿಕ ಸಂಪನ್ಮೂಲಗಳು ಉಳಿಯುವುದಿಲ್ಲ, ಸ್ವಾತಂತ್ರ ಎಂಬ ಪದಕ್ಕೆ ಅರ್ಥವಿರುವುದಿಲ್ಲ ಎಂದು ಸರಾಸಗಟು ತಿರಸ್ಕರಿಸಿದ್ದಾರೆ.
 ಇದೇ ವಿಷಯವಿರಿಸಿ ಪ್ರಧಾನಮಂತ್ರಿಗಳಿಗೆ, ಕೇಂದ್ರ ಕಾನೂನು ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕಾನೂನು ಮಂತ್ರಿಗಳಿಗೆ ಇಲ್ಲಿನ ತಹಶೀಲ್ದಾರ್ಮೂಲಕ ಮನವಿ ಸಲ್ಲಿಸಿದ್ದಾರೆ. ಮನವಿ ಸಲ್ಲಿಸುವುದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಸಭೆ ನಡೆಸಿದರು.
 ಸಮಿತಿ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೆರೆ, ಚಿನ್ನಿ ಪ್ರಕಾಶ್, ರಾಜೇಶ್, ಸಚಿನ್, ಸುನೀಲ್, ಗಿರೀಶ್, ವಿ. ಲೋಕೇಶ್, ವಿನೋದ್, ರಮೇಶ್, ಆದರ್ಶ, ಸುರೇಂದ್ರ, ಶೇಷಗಿರಿ, ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ, ಸಾರ್ವಜನಿಕ ಹಿತರಕ್ಷಣಾ ವೇದಿಕೆ ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement