ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗ್ರಾಮಾಭಿವೃದ್ಧಿಯೊಂದಿಗೆ ದೇಶಾಭಿವೃದ್ಧಿ ಸಾಧ್ಯ

Lingaraj Badiger
Updated On : 16 Aug 2013, 11:02 am

ಸಾಗರ: ರಾಷ್ಟ್ರೀಯ ಹಬ್ಬಗಳನ್ನು ಸಾರ್ವಜನಿಕ ಸೇವೆಗಳೊಂದಿಗೆ ಆಚರಿಸಿದರೆ ಗ್ರಾಮದ ಅಭಿವೃದ್ದಿಯೊಂದಿಗೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತ್ಯಾಗರ್ತಿ ಗ್ರಾಪಂ ಅಧ್ಯಕ್ಷ ಸ್ಯಾಜಿ ಮ್ಯಾಥ್ಯು ಅಭಿಪ್ರಾಯಪಟ್ಟರು.
 ಸಾಗರ ತಾಲೂಕು ತ್ಯಾಗರ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಮತ್ತು ಸ್ವ-ಸಹಾಯ ಹಾಗೂ ರೈತ ಬಂಧು ಸಂಘ ಸಂಸ್ಥೆಗಳು 67ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾಳೇಶ್ವರ ದೇವಸ್ಥಾನದ ಆವರಣ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು, ನಮ್ಮ ಊರು, ನಮ್ಮ ಗ್ರಾಮ ಇದರ ಸ್ವಚ್ಛತಾ ನಮ್ಮ ಕರ್ತವ್ಯ ಎಂದು ತಿಳಿದು ಎಲ್ಲರೂ ಕಾರ್ಯಪ್ರವೃತ್ತರಾದರೆ ಸ್ವಚ್ಛತೆ ಹಾಗೂ ಸುಂದರ ಗ್ರಾಮ ನಿರ್ಮಾಣ ಮಾಡಬಹುದು ಎಂದು ಕರೆ ನೀಡಿದರು.
 ಬರೂರು ವಲಯ ಮೇಲ್ವಿಚಾರಕ ಭೀಮಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲಸೆ ಪೇಟೆ, ಚಿಪ್ಪಳಿ,ಇಂಡುವಳ್ಳಿ, ತ್ಯಾಗರ್ತಿ, ಅಬಸೆ ಇನ್ನೂ ಹಲವಾರು ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮವನ್ನು ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ಏರ್ಪಡಿಸಲಾಗುವುದು ಎಂದರು.
 ಈ ಸಂಧರ್ಭದಲ್ಲಿ ಸೇವಾ ಕಾರ್ಯಕರ್ತ ಸುಧಾ, ನೇತ್ರಾವತಿ, ನಾಗರಾಜ್, ರಮೇಶ್, ಹರೀಶ್, ತುರ್ತು ಲೆಕ್ಕ ಪರಿಶೋಧಕ ಉಪೇಂದ್ರ, ಆಂತರಿಕ ಲೆಕ್ಕ ಪರಿಶೋಧಕಿ ಪೂರ್ಣಿಮಾ, ಹೈನುಗಾರಿಕಾ ಅಧಿಕಾರಿ ಸಹದೇವಿ ಹಾಗೂ ಸ್ಥಳೀಯ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement