ಸಿಪಿಐ ವಿರುದ್ಧ ಡಿಸಿಗೆ ದೂರು
ಹೊಸನಗರ: ಇತ್ತೀಚೆಗೆ ಪಪಂ ಸದಸ್ಯ ಸೈಯದ್ ಅಪಹರಣ ಪ್ರಕರಣದಲ್ಲಿ ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟ್‌ರ್ ಶಾಮೀಲಾಗಿದ್ದು ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಜೆಡಿಎಸ್ ಪ್ರಮುಖ, ಪಪಂ ಸದಸ್ಯ ಹೆಚ್.ಎನ್.ಶ್ರೀಪತಿರಾವ್ ತಿಳಿಸಿದ್ದಾರೆ. ದೂರಿದಲ್ಲಿ ಪಪಂ ಸದಸ್ಯರ ಅಪಹರಣದ ಪ್ರಕರಣ ನಡೆದಾಗಲು ದೂರು ನೀಡಲು ಹೋದಾಗ ದೂರು ತೆಗೆದುಕೊಳ್ಳಲು ನಿರಾಕರಿಸಿದ ಸಿಪಿಐ, ಮೇಲಾಧಿಕಾರಿಗಳ ಗಮನಕ್ಕೆ ತಂದ ನಂತರ ಅಪಹರಣವಾಗಿರುವ ಸೈಯದ್ ಪತ್ನಿ ಕರೆಸಿಕೊಂಡು ದೂರು ದಾಖಲಿಸಿರುತ್ತಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಬಗ್ಗೆ ಮುಂದೇನಾಯಿತು ಎಂದು ವಿಚಾರಿಸಲು ಹೋದಾಗಲು ನಿಮಗೇನು ಸಂಬಂಧ ಎಂದು ಪ್ರಶ್ನಿಸಿದ ಸಿಪಿಐ ಅಪಹರಣ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ.