ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾವ್ಯ ವಾಚನದಿಂದ ಮನಸ್ಸು ಪರಿವರ್ತನೆ

Mainashree
Updated On : 18 Aug 2013, 11:45 am

ಕ.ಪ್ರ.ವಾರ್ತೆ  ಮಲ್ಲಾಡಿಹಳ್ಳಿ  ಆ.17
ಕಾವ್ಯ ವಾಚನಗಳಿಂದ ಮನಸ್ಸು ಪರಿವರ್ತನೆಯಾಗುತ್ತದೆ ಎಂದು ಅನಾಥ ಸೇವಾಶ್ರಮದ ಆಡಳಿತಾಧಿಕಾರಿ ಹಾಗೂ ಸಾಹಿತಿ ರಾಘವೇಂದ್ರ ಪಾಟೀಲ ನುಡಿದರು.
ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ 2 ದಿನಗಳ ಕಾಲ ಏರ್ಪಡಿಸಲಾಗಿದ್ದ ಡಾ.ದ.ರಾ. ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನಸ್ಸು ಪರಿಶುದ್ಧ: ಸಮಾಜದಲ್ಲಿ ಮನಸ್ಸುಗಳು ವಿಕಾರಗೊಂಡಿದ್ದು, ಸಮಾಜದ ಅನಾರೋಗ್ಯಕ್ಕೆ ದಾರಿಯಾಗಿವೆ. ಇಂತಹ ಸಂದರ್ಭದಲ್ಲಿ ಕಾವ್ಯ ವಾಚನಗಳಿಂದ ಮನಸ್ಸುಗಳ ಪರಿವರ್ತನೆ ಸಾಧ್ಯ ಮತ್ತು ವಾಚನ, ಗಾಯನ ಹಾಗೂ ಕಾವ್ಯದ ವಿಶ್ಲೇಷಣೆಯಿಂದ ಅನುಭವ ವಿಸ್ತಾರವಾಗಿ ಮನಸ್ಸು ಪರಿಶುದ್ಧವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ 1980ರ ಸಾಲಿನಲ್ಲಿ ದ.ರಾ. ಬೇಂದ್ರೆಯವರಿಗೂ ಹಾಗೂ ಅನಾಥ ಸೇವಾಶ್ರಮಕ್ಕೂ ಇದ್ದ ಸಂಬಂಧವನ್ನು ಕುರಿತಂತೆ ತಿಳಿಸಿದರು.
ಸಂಖ್ಯೆ ದ್ವಿಗುಣವಾಗಲಿ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಸಮಾಜದಲ್ಲಿ ಓದುವ ಮತ್ತು ಓದಿದ ಕಾವ್ಯಗಳನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಾ ಸಾಗಬೇಕು. ಪ್ರಸ್ತುತ ಸಮಾಜದಲ್ಲಿ ಬೇಂದ್ರೆಯವರ ಕಾವ್ಯಗಳ ಮಹತ್ವವನ್ನು ಕುರಿತಂತೆ ನುಡಿದರು.
ಕಾವ್ಯಗಳ ವಾಚನದಿಂದ ಧರ್ಮ ಮಾರ್ಗದ ಮೂಲಕ ಸಾಧಕರು ಶಿಕ್ಷಣ ಕೊಟ್ಟರು. ಅದರ ಸಾಲಿನಲ್ಲಿ ಬೇಂದ್ರೆಯವರು ಮೊದಲ ಸಾಲಿನಲ್ಲಿ ನಿಲ್ಲುವರು ಎಂದು ಬೇಂದ್ರೆಯವರ ಜೀವನ ಕುರಿತಂತೆ ಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಸಮಾರಂಭದಲ್ಲಿ ಖ್ಯಾತ ಕಿರುತೆರೆ ನಟ ಅನಂತ ದೇಶಪಾಂಡೆ ಬೇಂದ್ರೆಯವರ ವೇಷ ಧರಿಸಿ ಅವರಂತೆ ನಟಿಸಿ ವಿದ್ಯಾರ್ಥಿಗಳಿಗೆ ಬೇಂದ್ರೆಯವರ ಸ್ಪಷ್ಟ ಕಲ್ಪನೆಯನ್ನು ಮೂಡಿಸಿದರು. ಮುಕುಂದ ಕುಲಕರ್ಣಿಯವರು ಬೇಂದ್ರೆ ರಚಿತ ಪದ್ಯಗಳನ್ನು ಹಾಡಿದರು. ಶ್ರೀ ರಾಘವೇಂದ್ರ ಕಾಲೇಜಿನ ಪ್ರಾಚಾರ್ಯ ಎಸ್. ರವಿಶಂಕರ್ ಸ್ವಾಗತಿಸಿದರು. ಉಪನ್ಯಾಸಕ ಎನ್. ಧನಂಜಯ ವಂದಿಸಿ, ರುದ್ರೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement