ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಾಲ್ಯದ ಘಟನೆಗಳು ವ್ಯಕ್ತಿತ್ವ ವಿಕಸನದ ಮೇಲೆ ಪ್ರಭಾವ

Mainashree
Updated On : 18 Aug 2013, 11:43 am

ಶಿವಮೊಗ್ಗ: ಬಾಲ್ಯದಲ್ಲಿ ನಡೆದ ಘಟನೆಗಳು ವ್ಯಕ್ತಿಯ ವ್ಯಕ್ತಿತ್ವ ವಿಕಸನದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಎಂದು ಪಾಸಿಟಿವ್ ಮೈಂಡ್ ಕ್ಲಿನಿಕ್‌ನ ಮನೋವೈದ್ಯ ಡಾ. ಎಸ್.ಟಿ. ಅರವಿಂದ್ ಹೇಳಿದರು.
ನಗರದ ರಾಜೇಂದ್ರ ನಗರದ ಪವಿತ್ರಾಂಗಣದಲ್ಲಿ ಕ್ಷೇಮ ಟ್ರಸ್ಟ್ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಅರಿವು, ಸ್ಕಿಜೋಫ್ರೀನಿಯದ ತಪ್ಪು ಕಲ್ಪನೆಗಳು- ವಾಸ್ತವಾಂಶಗಳು ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಭೀಕರ ಯೋಜನೆ: ಸ್ಕಿಜೋಫ್ರೀನಿಯಕ್ಕೆ ಒಳಗಾದ ರೋಗಿಗೆ ಕೇವಲ ಆಪ್ತಸಮಾಲೋಚನೆಯಿಂದ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಜೊತೆಗೆ ಸೂಕ್ಷ್ಮ ಔಷಧಿಗಳನ್ನು ನೀಡಬೇಕು ಎಂದ ಅವರು, ಪ್ರಸ್ತುತ ಸಮಾಜದಲ್ಲಿ ಯುವ ಜನತೆ ಮಾದಕ ವಸ್ತುಗಳ ಅತಿಯಾದ ಸೇವನೆಯಿಂದ ಮಾನಸಿಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಮಾನಸಿಕ ಕಾಯಿಲೆವುಳ್ಳ ವ್ಯಕ್ತಿಯಲ್ಲಿ ಶೇ.15ರಷ್ಟು ಅತ್ಮಹತ್ಯೆಯಂತಹ ಭೀಕರ ಯೋಚನೆಗಳು ಬರುತ್ತದೆ ಎಂದರು.
ಜನರು ದೈಹಿಕವಾಗಿ ಯಾವುದೇ ಕಾಯಿಲೆ ಬಂದಾಗ ತಕ್ಷಣವೇ ವೈದ್ಯರನ್ನು ಸಂಪರ್ಕ ಮಾಡುತ್ತಾರೆ. ಆದರೆ, ಮಾನಸಿಕವಾಗಿ ನೋವು ಮತ್ತು ಗೊಂದಲಗಳು ಉಂಟಾದಾಗ ವೈದ್ಯರನ್ನು ಸಂಪರ್ಕಿಸುವ ಪ್ರಮಾಣ ಕಡಿಮೆ ಆಗಿದೆ. ಅಂತಹ ವ್ಯಕ್ತಿಗಳನ್ನು ಕೂಡಲೇ ಚಿಕಿತ್ಸೆಗೊಳಪಡಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಉತ್ತಮ ಜೀವನ ನಡೆಸಿ: ಜೀವನದಲ್ಲಿ ಆಗುವ ಅಹಿತಕರ ಘಟನೆಗಳನ್ನು ಸಹಿಸಿಕೊಂಡು ಯೋಗ, ವ್ಯಾಯಾಮ, ಜೊತೆಯಲ್ಲಿ ಸೂಕ್ತ ಅಪ್ತಸಮಾಲೋಚನೆ ಪಡೆಯುವುದರ ಮೂಲಕ ಉತ್ತಮ ಜೀವನ ನಡೆಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಆರ್. ಶ್ರೀಧರ್, ಸಿಮ್ಸ್ ನಿರ್ದೇಶಕ ಡಾ.ಕೆ.ಎಸ್. ಗಂಗಾಧರ್, ಡಾ.ಕೆ.ಎಸ್. ಶುಭ್ರತಾ, ಹರೀಶ್, ಕುವೆಂಪು ವಿವಿ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಎಚ್.ಡಿ. ರವಿಕುಮಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement