ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 18 Aug 2013, 11:46 am

ನಾಳೆ ಚುನಾವಣೆ ಪೂರ್ವಭಾವಿ ಸಭೆ
ಚಿತ್ರದುರ್ಗ: ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯನ್ನು ಆ.19ರ ಸೋಮವಾರ ಬೆಳಗ್ಗೆ 11 ಗಂಟೆಗೆ ಹೊಳಲ್ಕೆರೆ ಪಟ್ಟಣದ ಒಂಟಿಕಂಬದ ಮಠದಲ್ಲಿ ಕೆಜೆಪಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಸಭೆಯಲ್ಲಿ ಮಾಜಿ ಶಾಸಕ ಎಂ. ಚಂದ್ರಪ್ಪ, ಕೆಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಪಿ. ರಮೇಶ್, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಈಶ್ವರಪ್ಪ ಭಾಗವಹಿಸಲಿದ್ದಾರೆ. ಸಭೆಗೆ ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಪಪಂ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಕೋರಿದ್ದಾರೆ.
ಸಾಕ್ಷರತಾ ದಿನಾಚರಣೆ
ಹಿರಿಯೂರು: ಅನಕ್ಷರತೆ ಸಮಸ್ಯೆ ತೊಡೆದು ಹಾಕಲು ದಶಕಗಳಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರೂ ನಿರೀಕ್ಷಿತ ಮಟ್ಟದ ಗುರಿ ಸಾಧನೆಯಾಗಿಲ್ಲವೆಂದು ಲೋಕ ಶಿಕ್ಷಣ ಕೇಂದ್ರದ ಅಭಿವೃದ್ಧಿ ಅಧಿಕಾರಿ ಶಂಕರ್ ಮೂರ್ತಿ ಹೇಳಿದರು.
 ತಾಲೂಕಿನ ಉಡುವಳ್ಳಿ ಗ್ರಾಮದ ಗ್ರಾಪಂ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಗ್ರಾಮ ಮಟ್ಟದಲ್ಲಿ ಸ್ವಯಂ ಸೇವಕರನ್ನು ನಿಯೋಜಿಸಿ ನಿರಂತರವಾಗಿ ಕಲಿಕಾ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಇನ್ನೂ ಅನಕ್ಷರತೆಯ ಸಮಸ್ಯೆಯನ್ನೂ ಹೋಗಲಾಡಿಸಲಾಗಿಲ್ಲ.
 ಈ ಹಿನ್ನೆಲೆಯಲ್ಲಿ ಇಂತಹ ಒಂದು ಸಾರ್ವತ್ರಿಕ ಪಿಡುಗನ್ನು ನಿರ್ಮೂಲನೆ ಮಾಡಲು ಇಲಾಖೆಯ ಜೊತೆಗೆ ಜನಸಾಮಾನ್ಯರು ಕೈಜೋಡಿಸಬೇಕಿದ್ದು ಅಕ್ಷರ ಜ್ಞಾನದ ಮಹತ್ವವನ್ನು ಅರಿತುಕೊಂಡು ಕಲಿಕೆಗೆ ಸ್ವಯಂ ಮುಂದಾದಾಗ ಇದು ಸಾಧ್ಯ ಎಂದು ಅವರು ಈ ಸಂದರ್ಭದಲ್ಲಿ  ಹೇಳಿದರು.
 ಸರ್ಕಾರ ವಿವಿಧ ಯೋಜನೆಗಳ ಮೂಲಕ ಸಂಪೂರ್ಣ ಸಾಕ್ಷರತಾ ಆಂದೋಲವ ಹಮ್ಮಿಕೊಂಡಿದ್ದು ವಿವಿಧ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಆಸ್ಥೆಯಿಂದ ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಬೇಕೆಂದು ಮನವಿ ಮಾಡಿದರು.
 ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಶಿಕ್ಷಕಿ ರುದ್ರಮುನಿ, ರಂಗಸ್ವಾಮಿ, ಮಾರಕ್ಕ,ಅಬ್ದುಲ್ ರೆಹಮಾನ್ ಸಾಬ್, ಪ್ರವೀಣ್ ಕುಮಾರ್ ಇದ್ದರು.
ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಸಾವು
ಚಿತ್ರದುರ್ಗ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಹೆಂಗಸೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ದೊಡ್ಡಾಲಘಟ್ಟ ಗ್ರಾಮದ ಕೆರೆಯ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಗ್ರಾಮದ ಬಂದಮ್ಮ (55) ಎಂಬುವರು ಬೆಳಗ್ಗೆ ಬಹಿರ್ದೆಸೆಗೆಂದು ಕೆರೆಯ ಹತ್ತಿರ ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತಳ ಮೈದುನ ದೂರು ನೀಡಿದ ಮೇರೆಗೆ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: ಆರು ಜನರ ಬಂಧನ
ಹಿರಿಯೂರು: ಈ ದಿನ ಮಧ್ಯಾಹ್ನ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ. ಗಿರೀಶ್.ಬಿ. ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ತಾಲೂಕಿನ ಈಶ್ವರಗೆರೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಆರು ಜನರನ್ನು ಬಂಧಿಸಿದ್ದು, ಬಂಧಿತರಿಂದ 8,190 ನಗದು ಹಣ, 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಚಿತ್ರದುರ್ಗ: ಕಂಟೇನರ್ ಲಾರಿಯೊಂದು ಟಿವಿಎಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿ.ಆರ್. ಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಜಿ.ಆರ್. ಹಳ್ಳಿ ವಾಸಿ ತಿಮ್ಮಾರೆಡ್ಡಿ (65) ಮೃತಪಟ್ಟ ವ್ಯಕ್ತಿಯಾಗಿದ್ದು, ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿ  ಆರೋಪಿ ಪರಾರಿ
ಚಳ್ಳಕೆರೆ: ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದ ವಿವಾಹಿತ ಮಹಿಳೆಯೊಬ್ಬರ ಮೇಲೆ ಆ ಮನೆಯ ವಿವಾಹಿತನೊಬ್ಬ ಅತ್ಯಾಚಾರ ವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೇವರಮರಿಕುಂಟೆಯ ಕೆಂಚಪ್ಪ ನಗರದ ತಿಪ್ಪೇಸ್ವಾಮಿಯವರ ಪುತ್ರ ಗಿರೀಶ್ ಅತ್ಯಾಚಾರ ನಡೆಸಿದಾತ.
ಪತಿ ಪಗಡಲಬಂಡೆಯಲ್ಲಿನ ಸಹೋದರಿಯ ಮನೆಗೆ ಹೋಗಿದ್ದರಿಂದ ಸಂಬಂಧಿಕರಾದ ತಿಪ್ಪೇಸ್ವಾಮಿಯವರ ಮನೆಗೆ ಮಹಿಳೆ ಹೋಗಿದ್ದರು. ಆಗ ಗಿರೀಶ್ ಈ ಕೃತ್ಯ ನಡೆಸಿದ್ದು, ಯಾರಿಗಾದರೂ ತಿಳಿಸಿದಲ್ಲಿ ಪ್ರಾಣ ತೆಗೆಯುವ ಬೆದರಿಕೆ ಹಾಕಿದ್ದಾನೆ.
ಗಿರೀಶನಿಗೆ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ವಿಷಯ ತಿಳಿದ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಸ್‌ಐ ಡಿ.ಜಿ ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಗಿರೀಶ ನಾಪತ್ತೆಯಾಗಿದ್ದಾನೆ.
11 ಮಂದಿ ಬಂಧನ
ಚಳ್ಳಕೆರೆ: ಪಟ್ಟಣದ ಬೆಂಗಳೂರು ರಸ್ತೆಯ ಸಪ್ತಗಿರಿ ಮಿಲ್‌ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಹಾಡಹಗಲೇ  ಜೂಜಾಟವಾಡುತ್ತಿದ್ದ ನಾಗೇಶ ಮತ್ತು ಇತರೆ ಹನ್ನೊಂದು ಜನರನ್ನು ಬಂಧಿಸಿರುವ ಪೊಲೀಸರು ಅವರಿಂದ ಜೂಜಾಟದ ರು. 17.300 ಹಾಗೂ ಇಸ್ಪೀಟ್ ಎಲೆ ವಶಪಡಿಸಿಕೊಂಡಿದ್ದಾರೆ.  ವೃತ್ತ ನಿರೀಕ್ಷಕ ಟಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಡಿ.ಜಿ ಶ್ರೀನಿವಾಸ್, ಪೊಬ್ರೆಷನರಿ ಪಿಎಸ್‌ಐ ರಾಘವೇಂದ್ರ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement