ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಮೆಸ್ಕಾಂ ಜನ ಸಂಪರ್ಕ ಸಭೆ

Rashmi Kasaragodu
Updated On : 19 Aug 2013, 11:23 am

ಶಿವಮೊಗ್ಗ: ಮಂಗಳೂರು ವಿದ್ಯುತ್ಚ್ಛಕ್ತಿ ಸರಬರಾಜು ಕಂಪನಿಯು ಆ.19ರಂದು ಬೆಳಗ್ಗೆ 10.30ರಿಂದ 12 ಗಂಟೆಯವರೆಗೆ ಶಿವಮೊಗ್ಗ ವೃತ್ತ ವ್ಯಾಪ್ತಿಯ ನಗರದ ಉಪವಿಭಾಗ-2 (ಕೃಷಿಕ ಸಮಾಜ, ಓ.ಟಿ. ರಸ್ತೆ) ರಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿದೆ. ಈ ಪ್ರದೇಶದ ವ್ಯಾಪ್ತಿಗೊಳಪಡುವ ಘಟಕ-4, ಕೆ.ಆರ್. ಪುರಂ. ಕಚೇರಿ ಘಟಕ-5, ಭಾರತೀಯ ಸಭಾ ಭವನದ ಹತ್ತಿರ, ಆರ್.ಎಂ.ಎಲ್. ನಗರ, 2ನೇ ಹಂತ ಕಚೇರಿ ಮತ್ತು ಘಟಕ-6, ಗುತ್ಯಪ್ಪ ಕಾಲೋನಿ ಕಚೇರಿಗಳ ವ್ಯಾಪ್ತಿಯ ಗ್ರಾಹಕರು ತಮ್ಮ ಅವಹಾಲುಗಳನ್ನು ಸಲ್ಲಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement