ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಂದಿ ಮಹಾದ್ವಾರ ಉದ್ಘಾಟನೆ

Rashmi Kasaragodu
Updated On : 19 Aug 2013, 11:22 am

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.18 ಮನುಷ್ಯ ಪ್ರತಿಷ್ಠೆಯಿಂದ ತನ್ನ ಬಂಧು, ಸಮಾಜದ ಜನರ ಮನೆಗೆ ಹೋಗಲು ಹಿಂದೇಟು ಹಾಕುತ್ತಾನೆ. ಇದರಿಂದ ವೈಯಕ್ತಿಕ ಬೆಳವಣಿಗೆಯೊಂದಿಗೆ ಸಮಾಜದ ಬೆಳವಣಿಗೆಗೂ ಕುಂಠಿತವಾಗುತ್ತದೆ. ಇದನ್ನು ಮನಗಂಡಿದ್ದ ನಮ್ಮ ಹಿರಿಯರು ಮಠ, ಮಂದಿರಗಳನ್ನು ನಿರ್ಮಿಸಿದರು ಎಂದು ಆನಂದಪುರ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ ಹೇಳಿದರು.
ಭಾನುವಾರ ಬಸವನಗುಡಿಯ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ನಂದಿ ಮಹಾದ್ವಾರ ಉದ್ಘಾಟನೆ ಹಾಗೂ ನೂತನವಾಗಿ ನಿರ್ಮಿಸಿರುವ ದೇವಸ್ಥಾನದಲ್ಲಿ ನವಗ್ರಹ, ನಾಗರಮೂರ್ತಿಯ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಿಳಕಿ ಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀ ಮನುಷ್ಯ ಇಂದು ತಂತ್ರಜ್ಞನಾನದ ಹಿಂದೆ ಬಿದ್ದು ಧಾರ್ಮಿಕ ಕಟ್ಟುಪಾಡುಗಳನ್ನು ಮರೆತಿದ್ದಾನೆ. ಕಷ್ಟ ಬಂದಾಗ ಜ್ಯೋತಿಷಿಗಳ ಬಳಿ ಹೋಗುವ ಮನುಷ್ಯ, ಪ್ರತಿನಿತ್ಯ ದೇವರನ್ನು ನೆನಪಿಸಿಕೊಳ್ಳುವಲ್ಲಿ ವಿಫಲನಾಗಿದ್ದಾನೆ ಎಂದ ಅವರು, ಸರ್ಪದೋಷ ನಿವಾರಣೆ ಮಾಡಿಕೊಳ್ಳಲು ಎಲ್ಲರೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಗೆ ಹೋಗಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡು ವೀರಶೈವ ಸಮಾಜ ದೇವಸ್ಥಾನದ ಆವರಣದಲ್ಲೇ ನವಗ್ರಹ ದೇವಸ್ಥಾನ ಹಾಗೂ ನಾಗರಮೂರ್ತಿ ಪ್ರತಿಷ್ಠಾಪಿಸಿರುವುದು  ಹೆಮ್ಮೆ ತರುವಂತಹದ್ದು ಎಂದರು.
ತಾವರಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶ್ರೀ ಮಾತನಾಡಿದರು.
ಸೇವಾ ಸಮಿತಿ ಅಧ್ಯಕ್ಷ ಡಾ.ಬಿ. ಶಿವಪ್ಪ, ಕೆ.ಎನ್. ಮರುಳಾರಾಧ್ಯ, ಎಚ್.ಎನ್. ಓಂಕಾರಪ್ಪ, ಜಿ. ನಂಜುಂಡಪ್ಪ, ಎಸ್. ಮಲ್ಲೇಶಪ್ಪ, ಟಿ.ವಿ. ಈಶ್ವರಯ್ಯ, ಎಚ್.ವಿ. ಮಹೇಶ್ವರಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ವಿಜಯಲಕ್ಷ್ಮೀ ಪಾಟೀಲ್, ಎಸ್.ಎಸ್. ಸತೀಶ್ ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement