ಪರಿಸರ ಸಮತೋಲನ: ತಿಳಿವಳಿಕೆ ಅಗತ್ಯ'
ಸೊರಬ: ಪರಿಸರ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ನಾವೀಗ ಪರಿಸರದ ಮಹತ್ವ ಅರಿತು ಜನ ಸಾಮಾನ್ಯರಿಗೆ ತಿಳುವಳಿಕೆ ನೀಡುವ ಕೆಲಸವನ್ನುಮಾಡಬೇಕಿದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾದರೂ ಜಾಗರೂಕರಾಗಿ ವಿಕಾಸಕ್ಕೆ ಅವಕಾಶ ನೀಡಬೇಕೆ ವಿನಃ ವಿನಾಶಕ್ಕೆ ಅವಕಾಶ ನೀಡಬಾರದು ಎಂದು ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ಎಂ. ಸತೀಶ್ ತಿಳಿಸಿದರು. ಪಟ್ಟಣದ ರಾಘವೇಂದ್ರ ಬಡಾವಣೆಯ ಬಾಲಿಕ ಹಿಪ್ರಾ ಶಾಲೆಯಲ್ಲಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲೂಕಿನ ವಿವಿದೆಡೆ ಗ್ರಾಮ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಟ್ಟಣದ ಕೆಲ ಕಾಲೋನಿ, ಶಾಲಾ ಆವರಣ, ಸಾರ್ವಜನಿಕ ಸ್ಥಳ ಮೊದಲಾದೆಡೆ ಪ್ಲಾಸ್ಟಿಕ್ ಹಕ್ಕುವುದು, ನೀರಿನ ಟ್ಯಾಂಕ್, ಮೋರಿ ಸ್ವಚ್ಛಗೊಳಿಸುವುದು. ಪರಿಸರ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು ಮುಂತಾದ ಕಾರ್ಯಕ್ರಮಗಳು ನಡೆದವು. ತಾಲೂಕು ಎಸ್ಕೆಡಿಆರ್ಡಿಪಿ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳವರು, ಸಾರ್ವಜನಿಕರು ಪಾಲ್ಗೊಂಡಿದ್ದರು.