ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೂಲ ಸೌಲಭ್ಯ ಕಲ್ಪಿಸದ ಜೋಗ ಪ್ರಾಧಿಕಾರ: ಆರೋಪ

Rashmi Kasaragodu
Updated On : 20 Aug 2013, 11:04 am

ಸಾಗರ: ಜೋಗಜಲಪಾತದ ಬಳಿ ಮೂಲಸೌಲಭ್ಯ ಸಮರ್ಪಕವಾಗಿ ನೀಡದೇ ಹಣ ವಸೂಲಿ ಮಾಡುತ್ತಿರುವ ಜೋಗ ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೋಗ ವೀಕ್ಷಣೆಗೆ ಬರುವ ಪ್ರವಾಸಿಗಳಿಗೆ ಪ್ರತಿಯೊಬ್ವರಿಗೂ ತಲಾ 5 ವಸೂಲು ಮಾಡಲಾಗುತ್ತಿದೆ. ಜೊತೆಗೆ ವಾಹನಗಳಿಗೆ ಅವುಗಳ ವಿವಿಧ ವರ್ಗಕ್ಕೆ ಅನುಗುಣವಾಗಿ 35ರಿಂದ 75ರ ವರೆಗೂ ಶುಲ್ಕ ವಿಧಿಸಲಾಗುತ್ತಿದೆ. ಮಳೆಗಾಲದಲ್ಲಿ ನೀರು ಹೆಚ್ಚಿರುವ ಸಂದರ್ಭದಲ್ಲಿ, ರಜಾ ದಿನಗಳಲ್ಲಿ ವೀಕ್ಷಣೆಗೆ ಬರುವ ಹತ್ತಾರು ಸಾವಿರ ಜನರಿಂದ ಹೀಗೆ ವಸೂಲಾಗುವ ಹಣ ತಿಂಗಳಿಗೇ ಲಕ್ಷಾಂತರ ರುಪಾಯಿ ಮೀರುತ್ತಿದೆ. ಹೀಗಿದ್ದೂ ಇಲ್ಲಿ ವಾಹನ ನಿಲ್ದಾಣ ವೀಕ್ಷಿಸಿದರೆ ದೇವರೇ ಗತಿ. ಕೆಸರು, ಕೊಚ್ಚೆಯ ಜೊತೆಗೆ ಬೇಕಾಬಿಟ್ಟಿ ನಿಲುಗಡೆ. ಹೇಳಿ ಕೇಳುವವರೇ ದಿಕ್ಕಿಲ್ಲ.
ಪ್ರಚಾರವೇ ಸಾಧನೆ: ವಸೂಲಿಗೆ ಆಸಕ್ತಿ ವಹಿಸುವ ಸಿಬ್ಬಂದಿ ನಿಲುಗಡೆಯ ಸ್ಥಳಕ್ಕೆ ಬರುವುದೇ ಇಲ್ಲ. ಅಲ್ಲಿಯೇ ಆಹಾರ ಸೇವಿಸಿ ಬಿಸಾಕುವ ಪೇಪರ್ ಪ್ಲೇಟುಗಳು, ಬಳಸಿದ ಪ್ಲಾಸ್ಟಿಕ್ಗಳು, ಕಪ್ಪುಗಳು ಹೀಗೆ ಒಂದೆರಡೇ ಅಲ್ಲ. ಅದೊಮ್ಮೆ ಪ್ಲಾಸ್ಟಿಕ್ ಮುಕ್ತ ಜೋಗ ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಮಾಡಿ ಪ್ರಚಾರ ಗಿಟ್ಟಿಸಿ ಪ್ರಚಾರ ಪಡೆದಿದ್ದೇ ದೊಡ್ಡ ಸಾಧನೆಯಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ ಇಂದು ಅದೆಲ್ಲ ಕಥೆಯಾಗಿ ಜೋಗ ಅಭಿವೃದ್ಧಿ ಪ್ರಾಧಿಕಾರ ಹೋಗಿ ವಸೂಲಿ ಪ್ರಾಧಿಕಾರವಾಗಿದೆ. ಇದರ ಉಸ್ತುವಾರಿ ನೋಡುವ ಜಿಲ್ಲಾಧಿಕಾರಿಗಳು ಅದೇಕೆ ನಿರ್ಲಕ್ಷ ವಹಿಸಿದ್ದಾರೆ ಗೊತ್ತಿಲ್ಲ. ಅಂತೂ ಪ್ರವಾಸಿಗರ ಪಾಡು ಹೇಳಿ ಕೇಳುವವರೇ ಇಲ್ಲ. ವಸೂಲಿ ಮಾಡಿದ ಮೇಲೆ ಅಲ್ಪಸ್ವಲ್ಪವಾದರೂ ವಿನಿಯೋಗಿಸಬೇಕಲ್ಲವೇ ಎನ್ನುವುದು ಪ್ರವಾಸಿಗರ ಹಾಗೂ ಸ್ಥಳೀಯರ ಪ್ರಶ್ನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement