ರಾಯರ ಆರಾಧನೆ
ಶಿರಾಳಕೊಪ್ಪ: ದ್ವಿತೀಯ ಮೃತ್ತಿಕಾ ಮಂತ್ರಾಲಯವೆಂದೇ ಪ್ರಸಿದ್ಧಿಪಡೆದ ಉಡಗಣಿ ಗುರುರಾಘವೇಂದ್ರ ಯತ್ರೀಂದ್ರರ 342ನೇ ಆರಾಧನಾ ಮಹೋತ್ಸವ ದಿನಾಂಕ 21ರಂದು ಶಿರಾಳಕೊಪ್ಪ ಹತ್ತಿರದ ಉಡಗಣಿಯಲ್ಲಿ ಪ್ರಾರಂಭವಾಗಲಿದೆ.
ಆ. 21 ರಿಂದ 24ರವರೆಗೆ 4 ದಿನ ಆರಾಧನಾ ಮಹೋತ್ಸವ ನಡೆಯಲಿದ್ದು, ಆರಾಧನಾ ಅಂಗವಾಗಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಶ್ರಾವಣ ಬಹುಳ ಪ್ರತಿಪದೆಯಂದು ಪ್ರಥಮ ಆರಾಧನೆ, ದಿ.22ರಂದು ಪುಣ್ಯದಿನ, ದಿ.23ರಂದು ರಥೋತ್ಸವ ಹಾಗು 24ರಂದು ಪವಮಾನ ಹೋಮ ಹಾಗೂ ವೇದವ್ಯಾಸರ ಪೂಜೆ ನಡೆಯಲಿದೆ. ಆರಾಧನೆ ಅಂಗವಾಗಿ ನಾಲ್ಕು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.