ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರಿಯಾದ ಜೀವನ ಕ್ರಮದಿಂದ ರೋಗಮುಕ್ತ

Rashmi Kasaragodu
Updated On : 20 Aug 2013, 11:05 am

ಸಾಗರ: ನಮ್ಮ ಜೀವನ ಕ್ರಮ ಹಾಗೂ ಆಹಾರ ಪದ್ಧತಿ ಸರಿಯಾಗಿದ್ದರೆ ರೋಗಗಳಿಂದ ಮುಕ್ತವಾಗಬಹುದು ಎಂದು ಯೋಗ, ನ್ಯಾಚುರೋಪತಿ ಹಾಗೂ ನ್ಯೂರೋಥೆರಫಿ ತಜ್ಞ ಡಾ. ರಘುಪತಿ ಭಟ್ ಹೇಳಿದರು.
ಸಂಪದ ಜನಜಾಗೃತಿ ಬಳಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ನ್ಯೂರೋಥೆರಫಿ ಜನಜಾಗೃತಿ ಕಾರ್ಯಕ್ರಮದಲ್ಲಿ, ಆಧುನಿಕ ಜೀವನ ಪದ್ಧತಿ ಮತ್ತು ಆಹಾರ ಕ್ರಮ ಆರೋಗ್ಯ ಸಮಸ್ಯೆಗಳನ್ನು ಉಲ್ಭಣಿಸುವಂತೆ ಮಾಡಿವೆ ಎಂದು ಅಭಿಪ್ರಾಯಪಟ್ಟರು.
ಡಾ. ಲಜಪತ್ರಾಯ್ ಮೆಹ್ರಾ ಸಂಶೋಧಿಸಿರುವ ನ್ಯೂರೋಥೆರಪಿಯಲ್ಲಿ ನಮ್ಮೆಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನಮ್ಮ ಸುತ್ತಮುತ್ತಲೇ ಇದೆ ಎಂಬ ತತ್ವವನ್ನು ಹೇಳಲಾಗಿದೆ. ದೇಹದ ನಿರ್ದಿಷ್ಟ ನರಗಳನ್ನು ಪ್ರಚೋದಿಸುವುದರಿಂದ ಸಾಕಷ್ಟು ರೋಗಗಳನ್ನು ಗುಣಪಡಿಸಬಹುದು ಎಂದರು.
ಸಂಕೀರ್ಣ ಪರಿಸ್ಥಿತಿ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜೆಸಿಐ ಅಧ್ಯಕ್ಷ ಶಿವಾನಂದ್ ಮಾತನಾಡಿ, ಮನೆ ಮದ್ದುಗಳ ಕುರಿತು ನಾವು ತೀರಾ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆ ರೋಗ ಮೂಲವನ್ನು ಸರಿಪಡಿಸುವ ಬದಲು ಕೇವಲ ರೋಗ ವಾಸಿ ಮಾಡುವ ಏಕೈಕ ಗುರಿಯತ್ತ ಮುನ್ನಡೆದಿರುವುದು ಹೆಚ್ಚು ಸಂಕೀರ್ಣ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ವೆಂಕಟೇಶ್ ಸಂಪ, ಕಲಾವತಿ, ಅಂಜಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement