ಹೃದಯ ಕಾಯಿಲೆ: ಆರ್ಥಿಕ ಸಹಾಯಕ್ಕೆ ಮನವಿ
ಸೊರಬ: ತಾಲೂಕು ಹುರಳಿ ಗ್ರಾಮದ ಎಚ್.ಜಿ. ರಾಮಣ್ಣ ಅವರ ಪತ್ನಿ ಗೀತಮ್ಮ ತೀವ್ರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದು, ಸಹಾಯ ಯಾಚಿಸಿದ್ದಾರೆ.
ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ತ್ವರಿತವಾಗಿ ಚಿಕಿತ್ಸೆ ಆಗದಿದ್ದಲ್ಲಿ ಪ್ರಾಣಾಪಾಯ ಉಂಟಾಗುವ ಆತಂಕವಿದೆ. ಕಡು ಬಡತನವಿರುವ ನಾವು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟವಾಗಿದೆ.
ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ಖರ್ಚು ಬರಬಹುದೆಂದು ವೈದ್ಯರು ತಿಳಿಸಿದ್ದು, ಸಹೃದಯ ದಾನಿಗಳು ಉದಾರ ಆರ್ಥಿಕ ಸಹಾಯ ಮಾಡುವ ಮೂಲಕ ಜೀವ ಉಳಿಸಿಕೊಡಿ ಎಂದು ಪತಿ ರಾಮಣ್ಣ ಮನವಿ ಮಾಡಿದ್ದಾರೆ.
ದಾನಿಗಳು ತಮ್ಮ ಕೈಲಾದ ಧನ ಸಹಾಯವನ್ನು ಎಚ್.ಜಿ. ರಾಮಣ್ಣ ಅವರ ಆನವಟ್ಟಿ ಕರ್ನಾಟಕ ಬ್ಯಾಂಕ್ ಶಾಖೆ 0062500101031901 (ಐಎಫ್ಎಸ್ ಕೋಡ್- ಕೆಎಆರ್ಬಿ 0000006) ಖಾತೆಗೆ
ಜಮಾ ಮಾಡಬಹುದಾಗಿದೆ.