ಪತ್ರ ಬರೆದಿಟ್ಟು ಯುವತಿ ಕಾಣೆ
ಶಿವಮೊಗ್ಗ: ಆಯನೂರು ಗ್ರಾಮದ ಜುಲ್ಫಿಕರ್ ಬಾಷಾ ಇವರ ಮಗಳು ನೂರ್ ಸಲ್ಮ ಆ.16ರಂದು ಮಧ್ಯಾಹ್ನ 2.30ರ ಹೊತ್ತಿಗೆ ಮನೆಯಲ್ಲಿ ಪತ್ರ ಬರೆದಿಟ್ಟು ತನ್ನನ್ನು ಯಾರು ಹುಡುಕುವುದು ಬೇಡವೆಂದು ತಿಳಿಸಿ ಕಾಣೆಯಾಗಿರುತ್ತಾರೆ.
18 ವರ್ಷ ವಯಸ್ಸಿನ ನೂರ್ ಸಲ್ಮ, 4.2 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕೆಂಪು ಬಣ್ಣದ ಹೂವು ಇರುವ ಬಿಳಿ ಬಣ್ಣದ ಟಾಪ್, ಕೆಂಪು ಹಸಿರು ಹೂ ಬಳ್ಳಿ ಇರುವ ಪ್ಯಾಂಟ್ ಧರಿಸಿದ್ದು, ಎಸ್ಎಸ್ಎಲ್ಸಿ ಪಾಸಾಗಿದ್ದು, ಕನ್ನಡ ಮಾತನಾಡುತ್ತಾರೆ.
ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಪತ್ತೆಯಾದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಿಗೆ ಅಥವಾ ಕುಂಸಿ ಪೊಲೀಸ್ ಠಾಣಾ ಸಬ್ಇನ್ಸ್ಪೆಕ್ಟರ್ ಅವರಿಗೆ ಕೋರಲಾಗಿದೆ. (ಕುಂಸಿ ಪೊಲೀಸ್ ಠಾಣೆ ದೂ.ಸಂ.- 08182 262332 ಹಾಗೂ ಶಿವಮೊಗ್ಗ ಗ್ರಾಮಾಂತರ ವೃತ್ತ ಕಚೇರಿ ದೂ.ಸಂ.- 08181 261410)