ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರಾಚೀನ ಸಾಹಿತ್ಯ ಜನತೆಗೆ ತಲುಪಿಸುವುದು ಗಮಕ ಕಲೆ ಮಾತ್ರ'

Rashmi Kasaragodu
Updated On : 21 Aug 2013, 11:39 am

ಶಿವಮೊಗ್ಗ: ಜನ ಸೇವೆ ಮಾಡಿದವರಿಗೆ ಎಂದಿಗೂ ಸಾವಿಲ್ಲ. ಈ ಸಾಲಿನಲ್ಲಿ ಪ್ರಮುಖವಾಗಿ ವಚನಕಾರರು ಮತ್ತು ಸಾಹಿತಿಗಳು ಸೇರುತ್ತಾರೆ ಎಂದು ಗಮಕ ಕಲಾ ಪರಿಷತ್ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ತಿಳಿಸಿದರು.
 ಬಸವಕೇಂದ್ರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ 176ನೇ ಶರಣ ಸಂಗಮ ಹಾಗೂ ಗಮಕ ಶ್ರಾವಣ ಸಮಾರೋಪ ಸಮಾರಂಭದಲ್ಲಿ ಅವರು, ದೇವಭಾಷೆ ಜನಸಾಮಾನ್ಯರಿಗೆ ಮುಟ್ಟದಿದ್ದಾಗ ಅದನ್ನು ವಚನಕಾರರು, ಸಾಹಿತಿಗಳು ತಮ್ಮ ಕಾವ್ಯ, ವಚನ, ಸಾಹಿತ್ಯಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿದ್ದರು.
 ಇವರ ಸೇವೆಯನ್ನು ಜಗತ್ತು ಸದಾ ಜ್ಞಾಪಿಸಿಕೊಳ್ಳುತ್ತದೆ ಎಂದರು.
ಜನರಲ್ಲಿ ಜಾಗೃತಿ: ಇಂದು ಶಿಕ್ಷಣ ಶೇ.74 ರಷ್ಟಿದೆ. ಆದರೆ, 12ನೇ ಶತಮಾನದಲ್ಲಿ ಶೇ.1ರಷ್ಟಿತ್ತು. ಹೆಚ್ಚು ಅನಕ್ಷರಸ್ಥರಿದ್ದರು. ಈ ಸಂದರ್ಭದಲ್ಲಿ ವಚನಕಾರರು, ಸಾಹಿತಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದ ಅವರು, ಶರಣ ಸಾಹಿತ್ಯ, ಶರಣ ಜೀವನ ಇಂದಿಗೂ ಪ್ರಸ್ತುತವಾಗಿದೆ. ಅದರಲ್ಲಿಯೂ ಪ್ರಾಚೀನ ಸಾಹಿತ್ಯವನ್ನು ಜನರಿಗೆ ನೆನಪಿಸುವುದು ಗಮಕಕಲೆ ಮಾತ್ರ ಎಂದರು.
 ಕಾರ್ಯಕ್ರಮದಲ್ಲಿ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ಘಟಕದ ಅಧ್ಯಕ್ಷೆ ಸುಶೀಲಾ ದೇವೇಂದ್ರಪ್ಪ, ಜಯಾ ರಾಜಶೇಖರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement