ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿಗೆ ಆಗೇಕೆ ಕಾಳಜಿ ಇರಲಿಲ್ಲ: ಕಾಂಗ್ರೆಸ್

Rashmi Kasaragodu
Updated On : 21 Aug 2013, 11:38 am

ಹೊಸನಗರ: ಈ ಬಾರಿಯ ಅತಿವೃಷ್ಟಿ ಮತ್ತು ಕೊಳೆರೋಗ ಪರಿಶೀಲನೆ ಮಾಡಿ ಸಮಗ್ರ ಪರಿಹಾರಕ್ಕೆ ಒತ್ತಾಯಿಸುತ್ತಿರುವ ಬಿಜೆಪಿ ಮುಖಂಡರಿಗೆ ಅಧಿಕಾರದಲ್ಲಿದ್ದಾಗ ಯಾಕೆ ಈ ಕಾಳಜಿ ತೋರಲಿಲ್ಲ ಎಂದು ಕಾಂಗ್ರೆಸ್ ಪ್ರಮುಖರು ಪ್ರಶ್ನಿಸಿದ್ದಾರೆ.
  ಕಳೆದ ವರ್ಷ ಹಿಂದೆಂದು ಕಂಡರಿಯದಷ್ಟು ನೆರೆ ಹಾವಳಿ ವ್ಯಾಪಿಸಿದ್ದು, ಬೆಳೆ ಕಳೆದುಕೊಂಡ ರೈತರು ಸಂಪೂರ್ಣ ಬರಿದಾಗಿದ್ದರು. ಆದರೆ ಉಪಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪರಾಗಲಿ ಆಡಳಿತ ಪಕ್ಷದ ಪ್ರಮುಖರಾದ ಆರಗ ಜ್ಞಾನೇಂದ್ರರಾಗಲಿ ಸೂಕ್ತ ಪರಿಹಾರ ನೀಡುವಲ್ಲಿ ವಿಫಲರಾಗಿದ್ದರು.
ನೈತಿಕ ಹಕ್ಕಿಲ್ಲ: ಆದರೆ ಇದೀಗ ಪರಿಶೀಲನೆ ನೆಪದಲ್ಲಿ ಚುನಾವಣಾ ರಾಜಕೀಯ ಮಾಡುತ್ತಿರುವ ಇವರಿಗೆ ಈಗಿನ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದ್ದಾರೆ.
 ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ ಎನ್ನುವುದನ್ನು ಇನ್ನಾದರೂ ಅರಿಯಲಿ ಎಂದು ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಿ. ರಾಮಚಂದ್ರ, ಮಾಜಿ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement