ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಕಲಿ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ

Rashmi Kasaragodu
Updated On : 22 Aug 2013, 10:46 am

ಶಿವಮೊಗ್ಗ: ಇಲ್ಲಿನ ಮಲ್ಲಿಗೇನಹಳ್ಳಿ ಗ್ರಾಮದ ದೇವಸ್ಥಾನ ಪಕ್ಕದಲ್ಲಿ ಇರುವ ಗ್ರಾಮಠಾಣಾ ಜಾಗದಲ್ಲಿ ಖಾಸಗಿಯವರು ಸೈಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಲ್ಲಿಗೇನಹಳ್ಳಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಮನವಿ ನೀಡಿದರು.
 ಇಲ್ಲಿನ ಮಲ್ಲಿಗೇನಹಳ್ಳಿಯ ಸರ್ವೆನಂ 57ರ ಗ್ರಾಮ ಠಾಣಾ ಜಾಗವಿದ್ದು, ಭೂತಪ್ಪನ ದೇವಸ್ಥಾನ ಇದೆ. ಅದರಲ್ಲಿ ಆಲದ ಮರ ಕೂಡ ಇದ್ದು, ಈ ಜಾಗವನ್ನು ಗಾಡಿಕೊಪ್ಪದ ಸೀಮೆಎಣ್ಣೆ ರಾಜ, ಮೂರ್ತಿ ಎಂಬುವವರು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ, ಸದರಿ ಜಾಗವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು.
ಜಾನುವಾರಿಗಳಿಗೆ ಮೇವಿಲ್ಲ: ಅಕ್ರಮ ದಾಖಲೆ ಸೃಷ್ಟಿಸುವ ಮೂಲಕ ಸರ್ಕಾರದ ಜಾಗವನ್ನು ಕ್ರಯಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟಿದ್ದ ಜಾಗ ಕೈತಪ್ಪಿ ಹೋಗುವಂತಾಗಿದೆ. ಜಾನುವಾರುಗಳಿಗೆ ಮೇಯಲು ಹುಲ್ಲು ಇಲ್ಲದಂತಾಗಿದೆ ಎಂದರು ಗ್ರಾಮಸ್ಥರು ಆಪಾದಿಸಿದರು.
ಜಿಲ್ಲಾಧಿಕಾರಿಗಳು ಕೂಡಲೇ ಅಕ್ರಮ ದಾಖಲೆ ಸೃಷ್ಟಿಸಿ, ಗ್ರಾಮಾಠಾಣಾ ಜಾಗವನ್ನು ಮಾರಾಟ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರದ ಆಸ್ತಿಯನ್ನು ರಕ್ಷಣೆ ಮಾಡಬೇಕು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಾಗರಾಜ್ ನಾಯ್ಕ್, ಶಂಕರ್ ನಾಯ್ಕ, ದೇವೇಂದ್ರನಾಯ್ಕ, ಲೋಕೇಶ್, ಚಂದ್ರಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement