ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೆಳೆ ಸಾಲ ನೀಡಲು ಕ್ರಮಕ್ಕೆ ಆಗ್ರಹ

Rashmi Kasaragodu
Updated On : 22 Aug 2013, 10:46 am

ಶಿವಮೊಗ್ಗ: ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಕೂಡಲೇ ಬೆಳೆ ಸಾಲವನ್ನು ರೈತ ಕುಟುಂಬಗಳಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಮಹದೇವ ಪ್ರಸಾದ್ ಅವರನ್ನು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಆಗ್ರಹಿಸಿದೆ.
ಪ್ರತಿ ವರ್ಷ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ರೈತ ಕುಟುಂಬಗಳಿಗೆ ಅವರ ಜಮೀನಿಗೆ ಮತ್ತು ಬೆಳೆಗಳಿಗೆ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಕೊಳ್ಳಲು ಸಕಾಲದಲ್ಲಿ ಬೆಳೆ ಸಾಲ ನೀಡಲಾಗುತ್ತಿತ್ತು. ಆದರೆ ಹಿಂದಿನ ಸರ್ಕಾರ ಸಾಲ ಮನ್ನಾ ಮಾಡಿದ್ದ 25 ಸಾವಿರಯನ್ನು ತುಂಬಿಲ್ಲ ಎಂಬ ಕಾರಣದಿಂದ ಈಗಿನ ಸರಕಾರ ರೈತ ಕುಟುಂಬಗಳಿಗೆ ಬೆಳೆಸಾಲವನ್ನು ಈ ತನಕ ನೀಡಿಲ್ಲ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ರೈತ ಕುಟುಂಬಗಳಿಗೆ ಕೃಷಿ ಚಟುವಟಿಕೆಗೆ ಮತ್ತು ಗೊಬ್ಬರ ಕ್ರಿಮಿ ನಾಶಕ ಕೊಳ್ಳಲು ಹಣದ ಅಗತ್ಯವಿದೆ. ಆದ್ದರಿಂದ ಕೂಡಲೇ ಸರಕಾರ ರೈತ ಕುಟುಂಬಗಳಿಗೆ ಬೆಳೆಸಾಲವನ್ನು ಈಗಲಾದರೂ ಮಂಜೂರು ಮಾಡಿ ರೈತ ಕುಟುಂಬಗಳಿಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿ ಫ್ಯಾಕ್ಸ್ ರವಾನಿಸಿರುವುದಾಗಿ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement