ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ
ಶಿವಮೊಗ್ಗ: ದಿ ಆರ್ಟ್ ಆಫ್ ಲಿವಿಂಗ್, ವ್ಯಕ್ತಿ ವಿಕಾಸ ಕೇಂದ್ರ, ವೈದಿಕ ಧರ್ಮ ಸಂಸ್ಥಾನ ಬೆಂಗಳೂರು ಹಾಗೂ ರವಿಶಂಕರ ವಿದ್ಯಾಮಂದಿರ ಶಿವಮೊಗ್ಗ ಆಶ್ರಯದಲ್ಲಿ ಆ.23ರಿಂದ 26ರ ವರೆಗೆ ನಗರದಲ್ಲಿ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿ ಆರ್ಟ್ ಆಫ್ ಲಿವಿಂಗ್ನ ಶಿಕ್ಷಕ ಕೆ. ಶಬರೀಶ್, ಸಂಜೆ 6ರಿಂದ 8.30ರ ವರೆಗೆ 100 ಅಡಿ ರಸ್ತೆ ವಿನಾಯಕ ನಗರದ ಕರಣ್ ಕಾನ್ಫರೆನ್ಸ್ ಹಾಲ್ನಲ್ಲಿ ಬೆಂಗಳೂರು ಆಶ್ರಮದ ಶ್ರೀ ವಿಷ್ಣುಪಾದ ಸ್ವಾಮೀಜಿ ಮಾರ್ಗದರ್ಶನದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಸಹಜ ಸಮಾಧಿ ಧ್ಯಾನ ಶಿಬಿರ ಏರ್ಪಡಿಸಲಾಗಿದೆ. 26ರಂದು ಬೆಳಿಗ್ಗೆ 6.30ರಿಂದ ಲೋಕಕಲ್ಯಾಣರ್ಥವಾಗಿ 108 ದಂಪತಿಗಳಿಂದ ಸಾಮೂಹಿಕ ರುದ್ರಾಭಿಷೇಕ, ಗುರುಪೂಜೆ, ದುರ್ಗಾದೀಪ ನಮಸ್ಕಾರ, ಶ್ರೀ ಚಕ್ರಪೂಜೆ, ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಠಣ, ದಿವ್ಯಸತ್ಸಂಗ ಹಾಗೂ ಧ್ಯಾನ ಶಿಬಿರ ಆಯೋಜಿಸಿದೆ.
ವಿವರಗಳಿಗಾಗಿ- 99640-72793, 9448039242 ಸಂಪರ್ಕಿಸಿ. ಗೋಷ್ಠಿಯಲ್ಲಿ ಎಚ್.ಬಿ. ರಮೇಶ್ ಬಾಬು, ಜಿಲ್ಲಾ ಸಮಿತಿ ಸದಸ್ಯೆ ಶ್ರೀರಂಜನಿ ಮತ್ತಿತರರು ಇದ್ದರು