29ರಿಂದ ಅಂತರ ಕಾಲೇಜು ಸ್ಪರ್ಧೆ
ಭದ್ರಾವತಿ: ಪಟ್ಟಣದ ಸರ್ ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಆ.29 ಮತ್ತು 30ರಂದು ಕುವೆಂಪು ವಿ.ವಿ. ಪುರುಷ ಮತ್ತು ಮಹಿಳೆಯರ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆ, ಪವರ್ ಲಿಫ್ಟಿಂಗ್ ಮತ್ತು ಪುರುಷರ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಸುಮಾರು 120 ವಿದ್ಯಾರ್ಥಿಗಳು, 80 ವಿದ್ಯಾರ್ಥಿನಿಯರು, 30 ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ. ಪಂದ್ಯಾವಳಿಯ ಉದ್ಘಾಟನೆ ಹಾಗೂ ಬಹುಮಾನ ವಿತರಣೆಯನ್ನು ಶಾಸಕ ಎಂ.ಜೆ. ಅಪ್ಪಾಜಿಯವರು ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.