ತೈರೋಜ್ ದೋಷಮುಕ್ತ
ಶಿವಮೊಗ್ಗ: ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಲಾಗಿದ್ದ ಶಿಕಾರಿಪುರದ ತೈರೋಜ್ ಅವರನ್ನು ಹೆಚ್ಚುವರಿ ಜಿಲ್ಲಾ ಮ್ತತು ಸತ್ರ ನ್ಯಾಯಾಲಯ ಶುಕ್ರವಾರ ದೋಷಮುಕ್ತಗೊಳಿಸಿದೆ.
ಶಿಕಾರಿಪುರದ ತೈರೋಜ್ ಇಂಡಿಯನ್ ಮುಜಾಯಿದ್ದೀನ್(ಐಎಂ)ನ ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್, ಇಕ್ಬಾಲ್ ಮತ್ತು ಮಕ್ಬೂಲ್ ಅವರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಶಂಕಿಸಲಾಗಿತ್ತು. ಈ ವೇಳೆ ಗುಜರಾತ್‌ನಲ್ಲಿ ಸ್ಫೋಟ ಕೂಡ ಆಗಿತ್ತು. ಈ ಹಿನ್ನೆಲೆಯಲ್ಲಿ ತೈರೋಜ್‌ನನ್ನು ಬಂಧಿಸಿ, ಪ್ರಕರಣವನ್ನು ಕೋಟೆ ಠಾಣೆಯಲ್ಲಿ ದಾಖಲಿಸಲಾಗಿತ್ತು.
ಠಾಣೆ ಸಬ್‌ಇನ್ಸ್‌ಪೆಕ್ಟರ್ ವಸಂತಕುಮಾರ್, ಡಿವೈಎಸ್‌ಪಿ ಶೇಖರಪ್ಪ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ್ದರು. ಇದೀಗ ಪ್ರಕರಣ ಕೈಗೆತ್ತಿಕೊಂಡಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಗಣೇಶ್ ಕುರುವತ್ತಿ ತೈರೋಜ್‌ನನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹಲ್ಲೆ: ಕ್ರಮಕ್ಕೆ ಷಡಾಕ್ಷರಿ ಆಗ್ರಹ
ಶಿವಮೊಗ್ಗ: ಶಿಕಾರಿಪುರದ ತಾಲೂಕು ಕಚೇರಿ ಆವರಣದಲ್ಲಿ ಸರ್ಕಾರಿ ನೌಕರನ ಮೇಲೆ ನಡೆದ ಹಲ್ಲೆಯನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಖಂಡಿಸಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆದಲ್ಲಿ ಸಂಘದದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.