ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೆ.22ರಂದು ಪ್ರತಿಭಾ ಪುರಸ್ಕಾರ

Lingaraj Badiger
Updated On : 24 Aug 2013, 10:53 am

ಭದ್ರಾವತಿ: ಭದ್ರಾವತಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ 2012-13ನೇ ಸಾಲಿನಲ್ಲಿ ಎಸ್ಸೆಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ, ವೈದ್ಯಕೀಯ ಹಾಗೂ ಇನ್ನಿತರ ಉನ್ನತ ಶಿಕ್ಷಣ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿರುವ ಮತ್ತು ಇದೇ ಸಾಲಿನಲ್ಲಿ ಕ್ರೀಡೆ ಮತ್ತು ಇತರೆ ಚಟುವಟಿಕಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಸ್ಥಾನಗಳಿಸಿರುವ ಒಕ್ಕಲಿಗ ಜನಾಂಗದವರನ್ನು ಸೆ.22ರಂದು ನಡೆಯಲಿರುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. 2013-14ರ ಸಾಲಿನಲ್ಲಿ ವೃತ್ತಿಪರ ಶಿಕ್ಷಣಗಳಾದ ವೈದ್ಯಕೀಯ, ತಾಂತ್ರಿಕ ಶಿಕ್ಷಣಗಳಾದ ಎಂ.ಟೆಕ್, ಬಿ.ಇ, ಎಂ.ಸಿ.ಎ, ಎಂ.ಬಿ.ಎ, ಡಿಪ್ಲೊಮ, ಐಟಿಐ ಮತ್ತು ಮಿಡ್‌ವೈಫ್ ಟ್ರೈನಿಂಗ್ (ಎ.ಎನ್.ಎಂ), ನರ್ಸರಿ ಟೀಚರ್ ಟ್ರೈನಿಂಗ್ (ಎನ್.ಟಿ.ಟಿ), ಡಿ.ಇಡಿ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆದು ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗ ಜನಾಂಗದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುವವರು ತಮ್ಮ ಸಂಬಂಧಿಸಿದ ದಾಖಲಾತಿಯೊಂದಿಗೆ ಹಾಗೂ ಆದಾಯ ದೃಢೀಕರಣ ಪತ್ರದ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿಲಾಗಿದೆ.
ಆಸಕ್ತರು ಮಾಹಿತಿಗಳನ್ನು ಸೆ.15ರೊಳಗೆ ಸಂಘದ ಕಚೇರಿ ವೇಳೆಯಲ್ಲಿ ತಲಪಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement