ಸುದ್ದಿ ಸಂಕ್ಷೇಪ
ಪಿಂಚಣಿ ಅದಾಲತ್
ಶಿವಮೊಗ್ಗ: ಭಾರತ ಸಂಚಾರ ನಿಗಮ ತನ್ನ ಪ್ರೀಪೇಯ್ಡ್ ಮೊಬೈಲ್ ಗ್ರಾಹಕರಿಗಾಗಿ 3, 299 ರುಪಾಯಿ ಮುಖಬೆಲೆಯ ಕರೆನ್ಸಿಗೆ ಉಚಿತ ಡಾಟಾ ಕಾರ್ಡ್ ನೀಡುವುದರ ಜೊತೆಗೆ ತಿಂಗಳಿಗೆ 2.5 ಜಿಬಿ ಡಾಟಾನಂತೆ ಒಂದು ವರ್ಷ ಉಚಿತವಾಗಿ ನೀಡಲಿದೆ. ಗ್ರಾಹಕರು ವಿವರಗಳಿಗಾಗಿ- 264022, 264044 ಇಲ್ಲಿಗೆ ಸಂಪರ್ಕಿಸಬಹುದು ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ತಾತ್ಕಾಲಿಕ ಅತಿಥಿ ಶಿಕ್ಷಕರ ಹುದ್ದೆಗೆ ನೋಂದಣಿ ಆರಂಭ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಸಹಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕ ಅವಧಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ಆ.26ರಿಂದ 31ರೊಳಗಾಗಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ವಿವರಗಳಿಗಾಗಿ ಸಮೀಪದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಶಿವಮೊಗ್ಗ: ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ 2012-13ನೇ ಸಾಲಿನ ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಪ್ರಥಮಬಾರಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ನಗದು ಬಹುಮಾನ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿವರಗಳಿಗಾಗಿ ಅಂತರ್ಜಾಲ ತಾಣ ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ ನ್ನು ವೀಕ್ಷಿಸಬಹುದು.
ಪಿಡಿಒ ಮೇಲೆ ಒತ್ತಡ: ದೂರು
ಸೊರಬ: ಆನವಟ್ಟಿ ಪಿಡಿಒ ವಿರುದ್ಧ ಪ್ರತಿಭಟನೆ ಹಾಗೂ ಒತ್ತಡ ತರುತ್ತಿರುವ ಇಬ್ಬರು ಗ್ರಾಪಂ ಸದಸ್ಯರ ವಿರುದ್ಧ ತಾಪಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳ ಸಂಘ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಆನವಟ್ಟಿ ಗ್ರಾಪಂ ವ್ಯಾಪ್ತಿಯ ಇಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿರುವ ಜಾಗವನ್ನು ಒತ್ತ್ತುವರಿ ಮಾಡಲಾಗಿದೆ ಎಂದು ಸದಸ್ಯರಾದ ಪಿ. ಹನುಮಂತಪ್ಪ, ವೆಂಕಟೇಶ್ ಗ್ರಾಪಂಗೆ ದೂರು ಸಲ್ಲಿಸಿದ್ದರು. ಈ ದೂರು ಅರ್ಜಿ ಗಣನೆಗೆ ತೆಗೆದುಕೊಂಡು ಕ್ರಮಕ್ಕೆ ತಾಪಂ ಇಒ ಹಾಗೂ ತಹಸೀಲ್ದಾರರ ಗಮನಕ್ಕೆ ಪಿಡಿಒ ತಂದಿದ್ದರು. ಆದರೂ ಈ ಇಬ್ಬರು ಸದಸ್ಯರು ಪಿಡಿಒಗೆ ಒತ್ತಡ ತರುತ್ತಿದ್ದು, ತಮಟೆಚಳುವಳಿ ಇತ್ಯಾದಿ ಹಮ್ಮಿಕೊಂಡು ಅಡ್ಡಿ ಪಡಿಸುತ್ತಿದ್ದಾರೆ. ಸದಸ್ಯರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.
ಕುವಿವಿ: ಕಾರ್ಯಕಾರಿ ಸಮಿತಿ ಚುನಾವಣೆ
ಶಿವಮೊಗ್ಗ: ಜ್ಞಾನ ಸಹ್ಯಾದ್ರಿ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯ ಎಂಪ್ಲಾಯೀಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ 2013-14 ರಿಂದ 2017-18ನೇ ಸಾಲಿಗೆ ಕಾರ್ಯಕಾರಿ ಸಮಿತಿಯ 11 ಸದಸ್ಯರು ಆಯ್ಕೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಆ.22ರಿಂದ ಸೆ.7ರ ವರೆಗೆ ಸಂಘದ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ನಾಮನಿರ್ದೇಶನ ಪತ್ರ ಪಡೆಯಲು ಆ.30 ಕಡೆಯ ದಿನವಾಗಿದೆ. ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಕೊನೆಯ ದಿನ. ಸೆ.7ರಂದು ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ಸಂಘದ ಕಚೇರಿಯಲ್ಲಿ ಮತದಾನ ನಡೆಯಲಿದ್ದು, ಮತದಾನದ ನಂತರ ಮತಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಸುಬ್ಬಣ್ಣ ಅವರು ತಿಳಿಸಿದ್ದಾರೆ.