ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಕ್ರಮ ನಿವೇಶನಗಳಿಗೆ ನಗರಸಭೆ ಖಾತೆ: ಆರೋಪ

Lingaraj Badiger
Updated On : 26 Aug 2013, 11:03 am

ಶಿವಮೊಗ್ಗ: ಅಕ್ರಮ ನಿವೇಶನಗಳಿಗೆ ನಗರಸಭೆಯು ಖಾತೆ ಮಾಡಿಕೊಟ್ಟಿದ್ದು, ಅದನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಮಲ್ಲಿಗೇನಹಳ್ಳಿ ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ನಗರಸಭಾ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ಮಲ್ಲಿಗೇನಹಳ್ಳಿ ಗ್ರಾಮದ ಸ.ನಂ.57-1ರಲ್ಲಿ ಸುಮಾರು 73 ನಿವೇಶನಗಳನ್ನು ರಚಿಸಿ, ಅವುಗಳನ್ನು 73 ಜನರಿಗೆ ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚುವಾಗ ಪ್ರತಿಯೊಬ್ಬ ಫಲಾನುಭವಿಯಿಂದಲೂ ನಗರಸಭೆ ಮಾಜಿ ಸದಸ್ಯ ರಾಜಣ್ಣ ತಲಾ 2 ಲಕ್ಷವನ್ನು ಪಡೆದು ನಗರಸಭೆಯಿಂದ ಖಾತೆಯನ್ನೂ ಸಹ ಮಾಡಿಕೊಟ್ಟಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಖಾತೆ ವಜಾ ಮಾಡಿ: ನಗರಸಭೆಯಲ್ಲಿ ನಿವೇಶನದ ಖಾತೆಯನ್ನು ಅಕ್ರಮವಾಗಿ ಮಾಡಿಕೊಡಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಅಕ್ರಮ ನಿವೇಶನಗಳಿಗೆ ಯಾವ ಆಧಾರದ ಮೇಲೆ ಖಾತೆ ಮಾಡಿದ್ದಾರೆ ಎಂಬ ಬಗ್ಗೆ ಪರಿಶೀಲಿಸಿ ಅಕ್ರಮವಾಗಿ ಮಾಡಿರುವ ಖಾತೆಯನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರಾದ ನಾಗರಾಜ ನಾಯ್ಕ, ದೇವೇಂದ್ರ, ಟೀಕ್ಯಾನಾಯ್ಕ, ರವಿ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement