ಇಂದು ಮೆಸ್ಕಾಂನಿಂದ ಜನಸಂಪರ್ಕ ಸಭೆ
ಶಿವಮೊಗ್ಗ: ಮೆಸ್ಕಾಂ ಶಿವಮೊಗ್ಗ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಘಟಕ-1, ಘಟಕ-2, ಗಾಜನೂರು, ಹೊಳಲೂರು, ಆಯನೂರು, ಹಾರ್ನಳ್ಳಿ, ಕುಂಸಿ ಶಾಖೆಗೆ ಸಂಬಂಧಿಸಿದಂತೆ ಜನಸಂಪರ್ಕ ಸಭೆಯನ್ನು ಆ.26ರಂದು ಬೆಳಗ್ಗೆ 10ರಿಂದ 1ರ ವರೆಗೆ ಗ್ರಾಮೀಣ ಉಪ ವಿಭಾಗದ ಶಿವಮೊಗ್ಗ ಕಚೇರಿಯಲ್ಲಿ ಏರ್ಪಡಿಸಿದೆ.
ಈ ಶಾಖಾ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ತಮ್ಮ ಅಹವಾಲುಗಳನ್ನು, ಕುಂದು ಕೊರತೆಗಳು ಏನಾದರೂ ಇದ್ದಲ್ಲಿ ಲಿಖಿತವಾಗಿ ಅಥವಾ ಖುದ್ದಾಗಿ ಭೇಟಿಯಾಗಿ ಸಲ್ಲಿಸಬಹುದಾಗಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.