ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ: ರಾಜ್ಯಮಟ್ಟಕ್ಕೆ ಆಯ್ಕೆ

Lingaraj Badiger
Updated On : 26 Aug 2013, 10:54 am

ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜೋಗ್- ಕಾರ್ಗಲ್ ಪಟ್ಟಣ ಪಂಚಾಯಿತಿ ಮತ್ತು ಸಾಗರ ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಕಾರ್ಗಲ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ವಿವಿಧ ತಾಲೂಕುಗಳಿಂದ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಈಗ ರಾಜ್ಯಮಟ್ಟಕ್ಕೆ ಆಯ್ಕೆಯಾದ ಚೆಸ್ ಆಟಗಾರರ ಪಟ್ಟಿ ಕೆಳಕಂಡಂತಿದೆ.
17 ವರ್ಷ ವಯೋವುತಿ (ಬಾಲಕರ ವಿಭಾಗ): ನಿಖಿಲ್ ಆರ್. ಉಮೇಶ್, ಚಿರಂತ್ ಎಂ.ಡಿ, ಧ್ರುವ ಚಿಪ್ಲಿ, ಆತ್ರೇಯ ಜಿ, ಪನ್ನಗ ವೈ.ಎಸ್.
17 ವರ್ಷ ವಯೋವುತಿ (ಬಾಲಕಿಯರ ವಿಭಾಗ): ಸಂಜನಾ ಆರ್, ಕಾವ್ಯ ಎಂ.ರಾವ್, ಚೇತನಾ ಆರ್.ಆಚಾರ್ಯ, ಪೃಥ್ವೀ ಪಿ, ಕವನ ಪ್ರಭು.
14 ವರ್ಷ ವಯೋವುತಿ (ಬಾಲಕರ ವಿಭಾಗ)-
ಶಶಾಂಕ್ ಎಚ್.ಎಸ್, ಆಜಯ್ ಆರ್.ಎಸ್, ಅವಿನಾಶಶ್ಸಿ.ಎಸ್, ಸಾತ್ವಿಕ್ ಎಂ.ಹೆಗ್ಡೆ, ಕೃಷ್ಣಕಾಂತ್.
14 ವರ್ಷ ವಯೋವುತಿ (ಬಾಲಕಿಯರ ವಿಭಾಗ)-
ಸಹನಾ ಎಸ್, ಸ್ಮಿತಾ ಜಿ.ರಾವ್, ಚಿತ್ಕಲಾ ವಿ.ಭಟ್, ಮನಸ್ವಿನಿ, ಮೇಧಿನಿ ಎ.ಎಸ್.
ಬಿಎಸ್‌ಎನ್‌ಎಲ್ ಕಚೇರಿ ಸ್ಥಳಾಂತರ
ಸಾಗರ: ಪಟ್ಟಣದ ಭಾರತೀಯ ದೂರವಾಣಿ ನಿಗಮದ ಉಪವಿಭಾಗೀಯ ಕಚೇರಿಯನ್ನು ಪ್ರಗತಿ ಸಂಯುಕ್ತ ಶಾಲೆಯ ಹಿಂದಿರುವ ಈಗಿನ ಸ್ಥಳದಿಂದ ನಗರಸಭೆ ಹಿಂಭಾಗದ ಬಿಎಸ್‌ಎನ್‌ಎಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಎಸ್‌ಡಿಓಟಿ ಡಿ.ಎಂ. ಗಜಾನನ ತಿಳಿಸಿದ್ದಾರೆ. ಸೋಮವಾರದಿಂದ ಈ ಸ್ಥಳದಲ್ಲಿ ಕಚೇರಿ ಚಾಲನೆಯಾಗಲಿದ್ದು, ಬಿ.ಎಸ್.ಎನ್.ಎಲ್. ಚಂದಾದಾರರು ಈ ಮುನ್ನ ಹೊರವಲಯದಲ್ಲಿದ್ದ ಕಚೇರಿಗೆ ಬರುವ ಸಂದರ್ಭದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಗಮನಿಸಿ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತರ ನಿಧಿಗೆಪರಿಹಾರ
ಶಿವಮೊಗ್ಗ: ಶಿರಾಳಕೊಪ್ಪ ಪಟ್ಟಣದ ನಾಗರಿಕರು, ದಾನಿಗಳು ಮತ್ತು ಲಯನ್ಸ್ ಇಂಟರ್ ನ್ಯಾಷನಲ್‌ನಿಂದ ಉತ್ತರಖಂಡ ಸಂತ್ರಸ್ಥರ ನೆರವಿಗೆ 81 ಸಾವಿರ ರುಪಾಯಿ ಪರಿಹಾರವನ್ನು ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರ ಮೂಲಕ ವಿತರಿಸಲಾಯಿತು.
 ಕ್ಲಬ್‌ನ ಅಧ್ಯಕ್ಷ ಎಂ.ಆರ್. ಗಿರೀಶ್, ಕಾರ್ಯದರ್ಶಿ ಚಂದ್ರಶೇಖರ ಮಂಚಾಲಿ, ಖಜಾಂಚಿ ಪ್ರಭುಲಿಂಗಪ್ಪ, ಮಾಜಿ ಅಧ್ಯಕ್ಷ ಎನ್.ಜಿ. ಗಿರೀಶ್, ಮಹೇಂದ್ರಕುಮಾರ್ ಜೈನ್, ವೇದಮೂರ್ತಿ, ದಯಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement