ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಪ್ರಕೃತಿಯೇ ನಾಡಿನ ದೊಡ್ಡ ಸಂಪತ್ತು'

Lingaraj Badiger
Updated On : 26 Aug 2013, 11:03 am

ಸಾಗರ: ಪ್ರಾಕೃತಿಕ ಸಂಪತ್ತೇ ನಾಡಿನ ದೊಡ್ಡ ಸಂಪತ್ತಾಗಿದ್ದು, ಇದರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಿಪಂ ಸದಸ್ಯ ರತ್ನಾಕರ ಹೊನಗೋಡು ಹೇಳಿದರು.
ತಾಲೂಕಿನ ಆನಂದಪುರಂ ಸಮೀಪದ ಐಗಿನಬೈಲು ಚೆನ್ನಮ್ಮಾಜಿ ಪ್ರೌಢಶಾಲೆಯಲ್ಲಿ ಹೊಸೂರು ಗ್ರಾಮ ಪಂಚಾಯ್ತಿ ಭಾನುವಾರ ಹಮ್ಮಿಕೊಂಡಿದ್ದ ಹಸಿರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯನ ದುರಾಸೆಯಿಂದ ಇಂದು ಪ್ರಾಕೃತಿಕ ಸಂಪತ್ತು ವಿನಾಶದ ಅಂಚಿಗೆ ಬಂದು ತಲುಪಿದೆ. ಪ್ರಾಕೃತಿಕ ಸಂಪತ್ತಿನ ನಾಶದಿಂದಾಗಿಯೇ ವಿಕೋಪಗಳು ಸಂಭವಿಸುತ್ತಿವೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಇನ್ನೂ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಗಿಡ ಬೆಳೆಸಲು ಮುಂದಾಗಿ: ಹಲವು ಅಪರೂಪದ ಸಸ್ಯಸಂಕುಲ ಪರಿಸರದಿಂದ ಕಣ್ಮರೆಯಾಗುತ್ತಿದೆ. ಇಂದಿನ ಪೀಳಿಗೆಯವರಿಗೆ ಹಲವು ಸಸ್ಯಗಳ ಪರಿಚಯವೇ ಇಲ್ಲದಂತಾಗಿದೆ. ಗ್ರಾಮೀಣ ಜನರಿಗೆ ಇಂದಿಗೂ ಅವುಗಳ ಜ್ಞಾನವಿದ್ದು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಇದನ್ನು ಬಳಸಿಕೊಂಡು ಅಂತಹ ಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
ತಾ.ಪಂ. ಸದಸ್ಯೆ ಜ್ಯೋತಿ ಮುರಳೀಧರ, ವಿವಿಧ ಜಾತಿಯ ಗಿಡಗಳನ್ನು ನೆಡುವುದರ ಜೊತೆಗೆ ಹಳೆಯ ಪಾರಂಪರಿಕ ಮರಗಳ ಸಂರಕ್ಷಣೆ, ಕಾರ್ಯವೂ ನಡೆಯಬೇಕು. ಪಾರಂಪರಿಕ ಕಾಡುಗಳಿಂದ ಹಲವು ಪ್ರಯೋಜನಗಳಿದ್ದು ಅವು ಪರಿಸರದ ಅವಿಭಾಜ್ಯ ಅಂಗವಾಗಿದೆ ಎಂದರು. ಹೊಸೂರು ಗ್ರಾಪಂ ಅಧ್ಯಕ್ಷ ಲೋಕೇಶ, ಉಪಾಧ್ಯಕ್ಷೆ ಪ್ರಭಾವತಿ ಶಂಕರಪ್ಪ, ಸದಸ್ಯರಾದ ಕಂಚುಗುಣಿ ನಾರಾಯಣಪ್ಪ, ಎಸ್.ಆರ್.ನಾಗಪ್ಪ. ಪ್ರಮುಖರಾದ ದಿನೇಶ ಎನ್, ಬಂಗಾರಪ್ಪ, ರಾಮಚಂದ್ರ, ಮಂಜುನಾಥ, ರಮೇಶ ಜನಾರ್ದನ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement