ಕ.ಪ್ರ. ವಾರ್ತೆ ಶಿರಾಳಕೊಪ್ಪ ಆ.26ಶಿಕಾರಿಪುರ ತಾಲೂಕಿನ ಕೊರಟಿಗೆರೆ- ಹುಲುಗಿನ ಕೊಪ್ಪ ಭಾಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಒಡಾಟಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬಿಡದಿರುವಿದನ್ನು ಖಂಡಿಸಿ ರೈತಸಂಘ ಹಾಗೂ ವಿದ್ಯಾರ್
ಶಿವಮೊಗ್ಗ: ಮುಂಬೈನಲ್ಲಿ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಕರ್ನಾಟಕ ಜನತಾ ಪಕ್ಷದ ಮಹಿಳಾ ಘಟಕದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದೇಶದಲ್ಲಿ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಡೀ ದೇಶವೇ ತಲೆತಗ್ಗಿಸುವಂತಹ ಕೆಲಸ ಇದಾಗಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಇಂತಹ ಹೇಯ ಕೃತ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತರಬೇಕು.
ಮುಂಬೈ ಘಟನೆಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಎಚ್ಚರವಹಿಸಲಿ: ದೇಶದಲ್ಲಿ ಮಹಿಳೆಯರ ಮೇಲೆ ದಿನೇ ದಿನೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹಿಂಸೆ ನೀಡುವಂತಹ ಮಾನವ ವಿರೋಧಿ ಹೇಯ ಕೃತ್ಯ ನಡೆಯುತ್ತಿದ್ದು, ಮಹಿಳೆಯರು ಭಯಮುಕ್ತರಾಗಿ ನಿರ್ಭೀತಿಯಿಂದ ನೆಮ್ಮದಿಯುತವಾಗಿ ಬದುಕುವಂತಹ ವಾತಾವರಣ ಸೃಷ್ಟಿಯಾಗಬೇಕು. ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಆರೋಪಿಗಳಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕು, ನಾಗರಿಕ ಸಮಾಜದಲ್ಲಿ ಇಂತಹ ಅನಿಷ್ಟಗಳು ನಡೆಯದಂತೆ ಸರ್ಕಾರಿ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಶೇಖರ್, ಪ್ರಧಾನ ಕಾರ್ಯದರ್ಶಿ ಕವಿತಾ ನಾಗರಾಜ್, ಅರ್ಚನಾ ಬಳ್ಳೆಕೆರೆ, ಅನಿತಾ ರವಿಶಂಕರ್, ರತನ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.