ಪರಿಸರ ಸ್ನೇಹಿ ಗಣಪತಿ ಮಾದರಿ ಪ್ರದರ್ಶನ, ಸ್ಪರ್ಧೆ
ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂತೆಕಡೂರು ಪರಿಸರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆ.31ರಂದು ಬೆಳಗ್ಗೆ 10 ಗಂಟೆಗೆ ವಿನೋಬನಗರದ ಪೊಲೀಸ್ ಚೌಕಿ ಹತ್ತಿರವಿರುವ ನೇತಾಜಿ ಪ್ರೌಢಶಾಲೆ (ವಿಕಾಸ ಶಾಲೆ ಹಿಂಭಾಗ)ಯಲ್ಲಿ ಪರಿಸರ ಸ್ನೇಹಿ ಗಣಪತಿ ಮಾದರಿಗಳ ಪ್ರದರ್ಶನ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಇಲ್ಲಿ ವಿವಿಧ ಪರಿಸರ ಸ್ನೇಹಿ ವಸ್ತುಗಳಲ್ಲಿ ಗಣಪತಿ ಮೂರ್ತಿ ತಯಾರಿಸಿ ತರಲು ಅವಕಾಶವಿದೆ. ಪ್ರತಿ ಶಾಲೆಯಿಂದ 3 ಮಾದರಿಗಳನ್ನು ಪ್ರದರ್ಶಿಸಬಹುದು.
ಪ್ರಬಂಧ ಸ್ಪರ್ಧೆಗೆ ವಿಷಯ- ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಯಲ್ಲಿ ನನ್ನ ಪಾತ್ರ. ಈ ಸ್ಪರ್ಧೆಗೆ ಪ್ರತಿ ಶಾಲೆಯಿಂದ 4 ಮಕ್ಕಳು ಭಾಗವಹಿಸಬಹುದಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಗಾಗಿ ಮಂಡಳಿಯ ಅಶೋಕ್ ಕುಮಾರ್ (ಮೊ.ನಂ.- 9845411908) ಹಾಗೂ ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರದ ದಿನೇಶ್ ಹೊಸನಗರ (ಮೊ.ನಂ.- 94807 68341) ಸಂಪರ್ಕಿಸಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಗಿದೆ.