ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಹುಣ್ಣಿಮೆಗಿದೆ ಹಬ್ಬದ ವಾತಾವರಣ'

Lingaraj Badiger
Updated On : 27 Aug 2013, 10:55 am

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.26
ನಮ್ಮ ಜನಪದರಲ್ಲಿ ಹುಣ್ಣಿಮೆಗೆ ಹಬ್ಬದ ವಾತಾವರಣವಿದೆ. ನಂಬಿಕೆಗಳಿವೆ. ಆಚಾರಗಳಿವೆ. ಜನಭಾಷೆಯ ಆಶಯಗಳಿವೆ. ಇವೆಲ್ಲದರಾಚೆ ಚಂದ್ರ ಪೂರ್ಣವಾಗಿ ಬೆಳಗಿದಾಗ ಪ್ರಕಾಶಮಾನತೆ ಹರಡುತ್ತೆ. ತಂಪು, ಕಾಂತಿಯಿಂದಾಗಿ ಅಮೃತಧಾರೆ ಹರಿದಂತೆ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಎಂದು ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಡಾ. ಜಯಶೀಲಹೇಳಿದರು.
ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ತಿಂಗಳು ಆಯೋಜಿಸುವ ಮನೆಮನ ಸಾಹಿತ್ಯ ಕಾರ್ಯಕ್ರಮ -ಸಾಹಿತ್ಯ ಹುಣ್ಣಿಮೆ 95- ಕಾರ್ಯಕ್ರಮ ಉದ್ಘಾಟಿಸಿದ ಇವರು ಚಂದ್ರ ರಾಮಾಯಣ ಹುಟ್ಟಲು ಕಾರಣನಾದ. ಬಾಲರಾಮ ಚಂದ್ರನನ್ನು ನೋಡಿ ತನಗೆ ಅದು ಬೇಕು ಎಂದು ಹಠ ಹಿಡಿದು ಅಳಲು ಆರಂಭಿಸಿದ.
ಕನ್ನಡಿ ಬಿಂಬ: ಅಳು ನಿಲ್ಲಿಸಲು ಪಟ್ಟ ಸಾಹಸವೆಲ್ಲ ವ್ಯರ್ಥವಾದಾಗ ಮಂಥರೆ ಕಂಕಳಲ್ಲಿ ಕನ್ನಡಿ ಇಟ್ಟುಕೊಂಡು ಚಂದ್ರನ ಬಿಂಬ ಕನ್ನಡಿಯಲ್ಲಿ ತೋರಿಸಿ ಸಮಾಧಾ ದಾನ ಮಾಡಿದ ಪ್ರಸಂಗ, ಅಳು ನಿಲ್ಲಿಸಿದ ರಾಮನನ್ನು ಮಂಥರೆ ಎತ್ತಿಕೊಳ್ಳಲು ಹೋದಾಗ ಕೌಶಲ್ಯೆ ಅದನ್ನು ತಡೆದ ಆ ಪ್ರಸಂಗ ಮುಂತಾದವುಗಳನ್ನು ವಿವರಿಸಿ ಚಂದ್ರನ ಕುರಿತು ಅನೇಕ ವಿಚಾರಗಳನ್ನು ತಿಳಿಸಿದರು.
ಸಾಹಿತ್ಯದ ಬೆಳಕು ಹಾಗೆ ಇರಬೇಕು. ಅದು ಭಾಷೆ, ಶಾಸ್ತ್ರೀಯ ಭಾಷೆ ಇವೆರಡು ಅಲ್ಲದೆ ಹಿತವಾದ ಭಾಷೆ ಸಾಹಿತ್ಯ ಭಾಷೆಯಾಗಿರಬೇಕು ಎಂದರು.
ನ್ಯಾ. ಕೃಷ್ಣಮೂರ್ತಿ ಸಿರ್ಸಿ, ನ್ಯಾಯಾಲಯದಲ್ಲಿ ಕನ್ನಡ ಬಳಕೆ ವಿಚಾರವಾಗಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಲವು ಪ್ರಯತ್ನ ಮಾಡಿದೆ. ಪರಿಣಾಮ ವಿಧಾನ ಪರಿಷತ್ತಿನಲ್ಲಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಅವರು ಮಂಡಿಸಿರುವ ಉಚ್ಚ ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ಅನುಕೂಲವಾಗುವಂತೆ ರಾಷ್ಟ್ರಪತಿಯವರ ಅನುಮತಿ ಪಡೆಯುವ ನಿರ್ಣಯ ಕುರಿತು ಸಭೆಗೆ ವಿವರಿಸಿದರು.
ನಗರಸಭಾ ಸದಸ್ಯ ನಾಗರಾಜ್ ಕಂಕಾರಿ, ತಾಲೂಕು ಕಸಾಪ ಅಧ್ಯಕ್ಷೆ ಶೀಲಾ ಸುರೇಶ್ ಮಾತನಾಡಿದರು. ಸಾಹಿತಿ ಡಾ. ಶರಶ್ಚಂದ್ರ ರಾನಡೆ ಅವರು ಚಂದ್ರಶೇಖರ ಆಜಾದ್ ಅವರ ಕುರಿತಾಗಿ, ವಸುಮತಿ ಬಾಪಟ್ ಅವರು ಗುರುಪೂರ್ಣಿಮೆಯ ಮಹತ್ವ ಕುರಿತು ವಿವರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿ ಕವನ ವಾಚಿಸಿದರು. ಗಾಯಕಿಯರಾದ ಮಮತಾ ಮತ್ತು ಶ್ರೀಮತಿ ನಾಗರಾಜಜ್ಕನ್ನಡ ಗೀತೆಗಳನ್ನು ಹಾಡಿದರು. ಎಂ. ನವೀನ್ ಕುಮಾರ್, ದತ್ತಾತ್ರಿ ಜೋಯ್ಸ್, ಬಿ.ಟಿ. ಅಂಬಿಕಾ, ಎಸ್.ಕೆ. ಸುಮಾ, ಗಿರಿಜಾ ಮಲ್ಲಪ್ಪ ಕವನ ವಾಚಿಸಿದರು. ಪ್ರಕಾಶ್ ಆರ್. ಕಮ್ಮಾರ್, ಕೆ. ಸಿದ್ದಪ್ಪ ಚುಟುಕು ವಾಚಿಸಿದರು. ವಕೀಲ ಎಚ್.ಪಿ. ಶೆಟ್ಟರ್ ಸ್ವಾಗತಿಸಿದರು. ಲಕ್ಷ್ಮೀ ಮಹೇಶ್ ನಿರೂಪಿಸಿದರು. ನಾಗರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement