ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆ್ಯಂಬುಲೆನ್ಸ್ ಖಾಸಗಿ ಕೆಲಸಕ್ಕೆ

Mainashree
Updated On : 29 Aug 2013, 11:51 am

ಶಿವಮೊಗ್ಗ: ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಿದ್ದ ಅಂಬ್ಯುಲೆನ್ಸ್‌ನ್ನು ಖಾಸಗಿ ಕೆಲಸಕ್ಕೆ ಬಳಸಿಕೊಂಡು ಕರ್ತವ್ಯ ಲೋಪವೆಸಗಿದ ಘಟನೆಯೊಂದು ನಗರದಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ದರ್ಜೆ ನೌಕರ ತಿಪ್ಪೇಶ್ ಕರ್ತವ್ಯ ಲೋಪವೆಸಗಿರುವ ವ್ಯಕ್ತಿ. ಆರೋಗ್ಯ ಕೇಂದ್ರದ ವೈದ್ಯರು ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದ್ದು, ಅಂಬ್ಯುಲೈನ್ಸ್‌ನಲ್ಲಿ ಮಹಿಳೆಯೊಂದಿಗೆ ಕೇಂದ್ರದ ಸಿಬ್ಬಂದಿ ತಿಪ್ಪೇಶ್‌ರನ್ನು ಕಳುಹಿಸಿದ್ದರು.
ಟೈಲ್ಸ್ ಸಾಗಾಣೆ: ಮೆಗ್ಗಾನ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲು ಮಾಡಿದ ತೀಪ್ಪೇಶ್, ಅಂಬ್ಯುಲೆನ್ಸ್‌ನ ಚಾಲಕ ಮಂಜುನಾಥ್‌ಗೆ ಖಾಲಿ ಅಂಬ್ಯುಲೆನ್ಸ್‌ನಲ್ಲಿ ಮನೆಗೆ ಬೇಕಾದ ಟೈಲ್ಸ್‌ನ್ನು ತೆಗೆದುಕೊಂಡು ಹೋಗೋಣ ಎಂದು ತಿಳಿಸಿದ್ದಾರೆ. ಅದರಂತೆ ನಗರದ ಟೈಲ್ಸ್ ಅಂಗಡಿಯೊಂದರಲ್ಲಿ ಸುಮಾರು 23 ಸಾವಿರ ಮೌಲ್ಯದ 300 ಟೈಲ್ಸ್‌ಗಳನ್ನು ಖರೀದಿಸಿ ಅಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದರು.  ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಅಂಬ್ಯುಲೆನ್ಸ್ ಹಾಗೂ ತಿಪ್ಪೇಶ್, ಮಂಜುನಾಥ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ತಿಪ್ಪೇಶ್ ಟೈಲ್ಸ್ ಖರೀದಿ ಮಾಡಿರುವ ಬಗ್ಗೆ ಸೂಕ್ತ ದಾಖಲೆ ನೀಡಿದ್ದರಿಂದ ತನಿಖೆಯ ವರದಿಯನ್ನು ದಾವಣಗೆರೆಯ ಡಿಎಚ್‌ಓ ಅವರಿಗೆ ಕಳುಹಿಸಿಕೊಡಲಾಗುವುದು. ಮುಂದಿನ ಕ್ರಮವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ವಿನೋಬನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement