ತಾಪಂ ಅಧ್ಯಕ್ಷರಾಗಿ ಭುವನೇಶ್ವರಿ ಅವಿರೋಧ ಆಯ್ಕೆ
ಭದ್ರಾವತಿ: ತಾಲೂಕು ಪಂಚಾಯ್ತಿ ಎರಡನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಭುವನೇಶ್ವರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಭುವನೇಶ್ವರಿ ಅವರ ವಿರುದ್ಧ ಜೆಡಿಎಸ್ನ ಪಾರ್ವತಿಬಾಯಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಎರಡೂ ಪಕ್ಷಗಳ ಮುಖಂಡರ ನಡುವೆ ನಡೆದ ಮಾತುಕತೆಯ ಪರಿಣಾಮವಾಗಿ ಪಾರ್ವತಿಬಾಯಿ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡ ಕಾರಣ ಭುವನೇಶ್ವರಿ ಅವಿರೋಧವಾಗಿ ಆಯ್ಕೆಯಾದರು.
ಅನೇಕ ತಾ.ಪಂ. ಸದಸ್ಯರುಗಳು, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿ.ಪಂ. ಸದಸ್ಯ ಎಸ್. ಕುಮಾರ್, ಕರಿಯಪ್ಪ, ಕಾಂಗ್ರೆಸ್ ಗ್ರಾಮಾಂತರ ಸಮಿತಿ ಅಧ್ಯಕ್ಷ ಮಂಜಪ್ಪಗೌಡ, ಪರಮೇಶ್ವರಪ್ಪ, ಮುರಳಿ ಮೊದಲಾದವರು ಇದ್ದರು.