ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಿಟಿ ಸುದ್ದಿ

Mainashree
Updated On : 29 Aug 2013, 11:51 am

ಜ್ಯೋತಿರಾಜ್ ಜತೆ ಮಾತುಕತೆ
ಶಿವಮೊಗ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 29ರಂದು ಬೆಳಿಗ್ಗೆ 10.30ಕ್ಕೆ ಮಥುರಾ ಪ್ಯಾರಡೈಸ್‌ನಲ್ಲಿ ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ (ಕೋತಿರಾಜ್) ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಜಿಲ್ಲೆಯಲ್ಲಿ ನಡೆದ ಹಲವು ಅವಘಡಗಳ ವೇಳೆ ಅವರು ಆಗಮಿಸಿ ನೊಂದವರಿಗೆ ನೆರವಾಗಿದ್ದು, ಆ ಕ್ಷಣದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅವರ ಸಾಹಸ ಸಂಸ್ಥೆಗೆ ಕಿರುಕಾಣಿಕೆ ನೀಡಲಿದೆ. ಈ ಸಂದರ್ಭದಲ್ಲಿ ಜ್ಯೋತಿರಾಜ್ ಅವರ ಸಂಸ್ಥೆಗೆ ನೆರವು ನೀಡಲಿಚ್ಚಿಸುವ ದಾನಿಗಳು ಹಾಗೂ ಸಂಘ, ಸಂಸ್ಥೆಗಳು ಬುಧವಾರ ಸಂಜೆಯೊಳಗೆ ಸೂರ್ಯನಾರಾಯಣ(94498 34322), ಉಪಾಧ್ಯಕ್ಷ ಜೇಸುದಾಸ್ (9972570126) ಅವರನ್ನು ಸಂಪರ್ಕಿಸಬಹುದು.
ಚಿತ್ರಕಲಾ ಸ್ಪರ್ಧೆ
ಶಿವಮೊಗ್ಗ: ವಿವೇಕ ಜಾಗ್ರತ ಬಳಗ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ 31ರಂದು 1ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿದೆ. ಶ್ರೀ ಕೃಷ್ಣ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮಾತ್ರ ಚಿತ್ರಿಸಬೇಕು. ಈ ಸ್ಪರ್ಧೆಯನ್ನು 3 ವಿಭಾಗದಲ್ಲಿ ನಡೆಸಲಾಗುವುದು. ಆಸಕ್ತರು ವಿವೇಕ ಜಾಗ್ರತ ಬಳಗ ಸೊಬಗು, ವಿನೋಬ ನಗರ 60 ಅಡಿ ರಸ್ತೆ, ಆಟೋ ನಿಲ್ದಾಣದ ಹತ್ತಿರ, ಜಯಾ ಸುರೇಶ್ ಇವರ ಮನೆಯ ಮಹಡಿ ಮೇಲೆ ಇರುವ ಸಂಜೀವಿನಿ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಹಾಜರಾಗಬೇಕು ಎಂದು ಬಳಗದ ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ. ವಿವರಗಳಿಗಾಗಿ- 9480205759.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement