ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ವಹಿತಾಸಕ್ತಿಗಾಗಿ ಮೂಲೆಗುಂಪು ಮಾಡುವ ಯತ್ನ

Mainashree
Updated On : 29 Aug 2013, 11:51 am

ಕ.ಪ್ರ.ವಾರ್ತೆ  ಶಿಕಾರಿಪುರ   ಆ.28
ಸ್ವಹಿತಾಸಕ್ತಿಗಾಗಿ ಸಮಾಜದ ಸದಸ್ಯರು ಒಕ್ಕಲಿಗ ಎಂದು ಗುರುತಿಸಿಕೊಂಡು ಕುಂಚಿಟಿಗ ಸಮಾಜವನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ಯತ್ನದಲ್ಲಿದ್ದಾರೆ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ ಪೀಠಾಧ್ಯಕ್ಷ ಶಾಂತವೀರ ಶ್ರೀ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ಜೈನಮಂದಿರದಲ್ಲಿ ನಡೆದ ಬನುಮಯ್ಯ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚಿಸಿದ ಅವರು, ಸಮಾಜದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸಬಲರಾದವರು ಹಲವರಿದ್ದು, ಅನೇಕರು ವಿವಿಧ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರೂ, ಸಮಾಜದ ಅಭಿವೃದ್ಧಿಗೆ ಉಪಯೋಗವಿಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಕುಂಚಟಿಗ ಎಂದು ಅಭಿಮಾನದಿಂದ ದಾಖಲೆಗಳಲ್ಲಿ ಬರೆಯಿಸಲು ಸೂಚಿಸಿದ ಅವರು ಸಮಾಜದ ಸಂಘಟನೆಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿವರ್ಷ ಪ್ರೋತ್ಸಾಹಿಸಲು ಕನಿಷ್ಠ ಗೌರವಧನ ನೀಡಲು ಸಹಕಾರ ಸಂಘದ ಡಿವಿಡೆಂಡ್‌ಗಳನ್ನು ಕನಿಷ್ಠ 10 ವರ್ಷ ಪಡೆಯದಂತೆ ತಿಳಿಸಿ, ಸಂಘದ ನಿರ್ದೇಶಕರು ಸಾಲ ಪಡೆಯದಂತೆ ಅನವಶ್ಯಕ ಖರ್ಚಿಗೆ ಕಡಿವಾಣ ಹಾಕಿ ಸಂಘದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ವ್ಯವಹರಿಸಲು ಸಲಹೆ ನೀಡಿದರು.
ಸಂಘಟನೆ ಕೊರತೆ: ಕೊರಟಗೆರೆ ಎಲೆರಾಂಪುರ ಕುಂಚಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಹನುಮಂತನಾಥ ಮಹಾಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕುಂಚಟಿಗರು 80 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದು, ಕನಿಷ್ಠ 8-10 ವಿಧಾನಸಭಾ ಕ್ಷೇತ್ರವನ್ನು ಜಯಗಳಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಸಂಘಟನೆಯ ಕೊರತೆಯಿಂದಾಗಿ ಸಮಾಜ ದುರ್ಬಲವಾಗಿದೆ ಎಂದ ಅವರು ಪತ್ತಿನ ಸಂಘದ ಮೂಲಕ ಸಂಘಟನೆ ಸದೃಢವಾಗಿಸಿಕೊಳ್ಳಲು  ತಿಳಿಸಿದರು.
ಸಂಘದ ಅಧ್ಯಕ್ಷ ಜೆ.ಸಿ. ಜಗದೀಶ್ ಮಾತನಾಡಿ, ಕೇವಲ ಸಮಾವೇಶದಿಂದ ಮಾತ್ರ ಸಂಘಟನೆ ಅಸಾಧ್ಯ ಎಂದು ಪತ್ತಿನ ಸಹಕಾರ ಸಂಘ ಆರಂಭಿಸಲಾಗಿದ್ದು, ಎಲ್ಲಾ ಸಮಾಜದ ಸದಸ್ಯರ ಜತೆ ಗೌರವ ವಿಶ್ವಾಸದಿಂದ ವರ್ತಿಸಿ ಸಂಘದ ಮೂಲಕ ಸಂಘಟನೆಯನ್ನು ಸದೃಢಪಡಿಸಲು ಸೂಚಿಸಿದರು.
ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರವೀಣ ಕುಮಾರ್ ಬನುಮಯ್ಯ, ಮಹಾದೇವಪ್ಪ, ಅರುಣ್, ರಾಷ್ಟ್ರೀಯ ಕುಂಚಟಿಗ ಮಹಾಸಭಾದ್ಯಕ್ಷ ಕೆ.ಪಿ. ರುದ್ರಪ್ಪ, ಮುರಳೀಧರ ಹಾಲಪ್ಪ, ರಾಮಕೃಷ್ಣಪ್ಪ, ಗೋವಿಂದಪ್ಪ ಮಾಸ್ತರ್, ಅಶೋಕಣ್ಣ ಸವಣೂರು, ದಿಲೀಪ್ ಕುಮಾರ್ ಕಾನಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement