ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ

Mainashree
Updated On : 29 Aug 2013, 11:50 am

ಕ.ಪ್ರ.ವಾರ್ತೆ  ಸಾಗರ   ಆ.28
ಗೋಹತ್ಯಾ ನಿಷೇಧ ಕಾಯ್ದೆಯನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಕೊಳೆರೋಗದಿಂದ ಹಾನಿಗೊಳಗಾದ ಅಡಕೆ ಬೆಳೆಗಾರರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸಿ ತಾಲೂಕು ಬಿಜೆಪಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯು.ಎಚ್. ರಾಮಪ್ಪ ಮಾತನಾಡಿ, ಗಾಂಧೀಜಿ ಹೆಸರನ್ನು ಪದೇಪದೇ ಉಚ್ಚರಿಸುವ ಕಾಂಗ್ರೆಸ್ ಗಾಂಧೀಜಿಯವರು ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಹೇಳಿದ್ದನ್ನು ನೆನಪು ಮಾಡಿಕೊಳ್ಳಬೇಕು ಎಂದರು.
ಅನುಷ್ಠಾನಕ್ಕೆ ಬಂದಿಲ್ಲ: ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ. ಗೋ ಸಂತತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ 2010ರಲ್ಲಿ ಬಿಜೆಪಿ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆಯನ್ನು ವಿಧಾನಸೌಧದಲ್ಲಿ ಅಂಗೀಕರಿಸಿ ರಾಜ್ಯಪಾಲರ ಸಹಿಗೆ ಕಳಿಸಿಕೊಟ್ಟಿತ್ತು. ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳಿಸಿದ್ದು, ಅದು ಈತನಕ ಅನುಷ್ಠಾನಕ್ಕೆ ಬಂದಿಲ್ಲ ಎಂದರು.
2012ರಲ್ಲಿ ಮತ್ತೆ ಬಿಜೆಪಿ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆಗೆ ಕೆಲವು ತಿದ್ದುಪಡಿ ತಂದು ವಿಧಾನ ಸೌಧದಲ್ಲಿ ಅಂಗೀಕರಿಸಿ ರಾಜ್ಯಪಾರಿಗೆ ಕಳಿಸಿದ್ದು, ಅದು ಸಹ ಬಾಕಿ ಉಳಿದಿದೆ. ಈಗಿನ ಕಾಂಗ್ರೆಸ್ ಸರ್ಕಾರ ಈ ಎರಡೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಉದ್ದೇಶಿರುವ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಧಾರ್ಮಿಕ ಭಾವನೆಗೆ ದಕ್ಕೆ: ರಾಜ್ಯ ಸರ್ಕಾರ ಗೋಹತ್ಯೆಗೆ ಪ್ರಚೋದಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಇದು ಅಲ್ಪಸಂಖ್ಯಾತರನ್ನು ಓಲೈಸುವ ಕ್ರಮವಾಗಿದ್ದು, ಯಾವುದೇ ಕಾರಣಕ್ಕೂ ಗೋಹತ್ಯೆ ದೇಶದ ಬಹುಸಂಖ್ಯಾತ ಹಿಂದುಗಳ ಸಹಿಸುವುದಿಲ್ಲ. ಈ ಬಗ್ಗೆ ಹಿಂದು ಸಮಾಜ ಜಾಗೃತವಾಗಬೇಕು ಎಂದು ಹೇಳಿದರು.
ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಚೇತನಾ ರಾಜ್ ಕಣ್ಣೂರು, ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬರದಿದ್ದರೆ ಗೋಸಂತತಿ ನಿರ್ನಾಮವಾಗುತ್ತದೆ. ರಾಜ್ಯ ಸರ್ಕಾರ ಯಾವುದೆ ಕಾರಣಕ್ಕೂ ಗೋಹತ್ಯಾ ನಿಷೇಧ  ಕಾಯ್ದೆಯನ್ನು ಹಿಂದಕ್ಕೆ ಪಡೆಯಬಾರದು ಎಂದು ಒತ್ತಾಯಿಸಿದರು.
ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೊಳೆ ರೋಗದಿಂದ ಅಪಾರ ಪ್ರಮಾಣ ಅಡಕೆ ನಾಶವಾಗಿ ರೈತರು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ಕೂಡಲೇ  ಎಕರೆಗೆ ರು. 25,000ದಂತೆ ಪರಿಹಾರ ನೀಡಬೇಕು. ಅಡಕೆ ತೋಟಕ್ಕೆ ಔಷಧಿ ಸಿಂಪಡಿಸಲು ಉಚಿತವಾಗಿ ಬೋರ್ಡೋ ದ್ರಾವಣ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸತೀಶಬಾಬು, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಶೇಟ್, ವ.ಶಂ. ಾಮಚಂದ್ರ ಭಟ್, ಪ್ರಮುಖರಾದ ರವೀಶಕುಮಾರ್, ತ್ಯಾಗಮೂರ್ತಿ, ಪುರುಷೋತ್ತಮ, ರಾಘವೇಂದ್ರ ಭಟ್, ಕೋಮಲ್ ರಾಘವೇಂದ್ರ, ಕಸ್ತೂರಿ ನಾಗರಾಜ್,
ಗಂಗಮ್ಮ, ಎಸ್.ವಿ. ಕೃಷ್ಣಮೂರ್ತಿ, ಬಾಲಕೃಷ್ಣ, ಗುಳೇದ್, ಎಲ್.ವಿ. ನಾಗರಾಜ್, ಕೆ.ವಿ. ಪ್ರವೀಣಕುಮಾರ್, ಅರವಿಂದ್, ನಾಗರತ್ನಮ್ಮ, ಶ್ರೀನಿವಾಸ್, ರಾಜು ಮಡಿವಾಳ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement