ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಂಜಾರ ಸೇವಾ ಟ್ರ್‌ಸ್ಟ್ ಅಸ್ಥಿತ್ವಕ್ಕೆ

Lingaraj Badiger
Updated On : 31 Aug 2013, 11:00 am

ಶಿವಮೊಗ್ಗ: ಬಂಜಾರ ಸಮುದಾಯದ ಅಭಿವೃದ್ಧಿಯ ಉದ್ದೇಶದಿಂದ ಬಂಜಾರ ಸೇವಾ ಟ್ರ್‌ಸ್ಟ್, ಬಂಜಾರ ಕಲೆ ಮತ್ತು ಸಾಂಸ್ಕೃತಿಕ ಸೇವಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಸೆ. 22ರಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ ಟ್ರಸ್ಟ್‌ಗೆ ವಿದ್ಯುಕ್ತ ಚಾಲನೆ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷ ಆಯನೂರು ಶಿವಾನಾಯ್ಕ್ ತಿಳಿಸಿದರು.
 ಸುದ್ದಿಗೋಷ್ಠಿಯಲ್ಲಿ ಅವರು, ಬಂಜಾರ ಸಮಾಜದ ಶೋಷಿತರಿಗೆ, ಬಡವರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಜಾಗೃತಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರ ನಡೆಸುವುದು. ಬಂಜಾರ ಸಮಾಜವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದು ಟ್ರಸ್ಟ್‌ನ ಉದ್ದೇಶವಾಗಿದೆ ಎಂದರು.
ಸ್ವಯಂ ಉದ್ಯೋಗ: ಪ್ರತಿ ವರ್ಷ ಕಲೆ ಮತ್ತು ಸಾಂಸ್ಕೃತಿಕ ಜಾನಪದ ಜಾತ್ರೆ ಆಯೋಜನೆ, ವದ್ಧಾಶ್ರಮ, ಅನಾಥಾಶ್ರಮ, ಸ್ತ್ರೀಶಕ್ತಿ ಸಂಘ ಸ್ಥಾಪನೆ, ಸಹಕಾರ ಸಂಘಗಳ ಮೂಲಕ ಸ್ವಯಂ ಉದ್ಯೋಗ ಹೀಗೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮತಾಂತರ ವಿರುದ್ಧ ಜಾಗೃತಿ, ಸಮಾಜದ ಬಡ ಮಕ್ಕಳಿಗೆ ಶಿಕ್ಷಣ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ವಿನಾಕಾರಣ ಗೊಂದಲ: ಚಿತ್ರದುರ್ಗದ ಮುರುಘಾ ಶರಣರು ನಮ್ಮ ಸಮಾಜಕ್ಕೆ ಸಂಬಂಧ ಇರದ ವ್ಯಕ್ತಿಯನ್ನು ಸ್ವಾಮೀಜಿಯಾಗಿ ಮಾಡಿದ್ದಾರೆ. ಆ ವ್ಯಕ್ತಿಗೂ ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ ಎಂದ ಅವರು, ಸೇವಾಲಾಲ್ ಜನ್ಮಸ್ಥಳ ಸೂರಗೊಂಡನಕೊಪ್ಪದಲ್ಲಿ ಯಾವ ಸ್ವಾಮೀಜಿಗೂ ಸ್ಥಾನ ಕೊಟ್ಟಿಲ್ಲ. ಅಲ್ಲಿ ಪೀಠಾಧ್ಯಕ್ಷರೂ ಇಲ್ಲ. ಟ್ರಸ್ಟ್ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ನಮ್ಮ ಸಮಾಜಕ್ಕೆ ಬೇಕಾದ ಸ್ವಾಮೀಜಿ ಬಗ್ಗೆ ಸಮಾಜದ ಹಿರಿಯರು, ಗುರುಗಳು ನಿರ್ಧರಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ, ಮುರುಘಾ ಶರಣರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
 ಹೀಗಿದ್ದರೂ ಸರ್ದಾರ್ ಸ್ವಾಮೀಜಿಯನ್ನು ಮುರುಘಾ ಶರಣರು ನೇಮಕ ಮಾಡಿದ್ದಾರೆ. ಅವರಿಗೆ ಜಮೀನು ನೀಡಿ, ಜನಾಂಗದ ಸ್ವಾಮೀಜಿಯಾಗಿ ಬಿಂಬಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಎಚ್.ಎನ್. ರೇಖ್ಯಾನಾಯ್ಕ, ಮಂಜುಳಾ, ಕಾರ್ಯದರ್ಶಿ ಕೆ. ಶಶಿಕುಮಾರ್, ಸಹ ಕಾರ್ಯದರ್ಶಿ ಎಚ್.ಡಿ. ಬಸವರಾಜ, ಡಿ. ಶಿವನಾಯ್ಕ, ತಾರದೇವಿ, ಖಜಾಂಚಿ ಕುಮಾರ ನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement