ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಸ್ಸು ನಿಲ್ದಾಣ ಕಾಮಗಾರಿ ಕಳಪೆ; ಆರೋಪ

Lingaraj Badiger
Updated On : 31 Aug 2013, 10:52 am

ಸಾಗರ: ತಾಳಗುಪ್ಪ ಹೋಬಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಬಸ್ಸು ನಿಲ್ದಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕನ್ನಡ ಭಾಷೆಯನ್ನು ತಪ್ಪುತಪ್ಪಾಗಿ ಬರೆಯಲಾಗಿದೆ ಎಂದು ಹೋಬಳಿಯ ಜೆಡಿ(ಎಸ್) ಘಟಕ ದೂರಿದೆ.
ತಾಳಗುಪ್ಪ ಹೋಬಳಿಯ ಸೈದೂರು, ಕಣಸೆ, ಗೀಜಗಾರು, ತಾಳಗುಪ್ಪ ಬಸ್ಸು ನಿಲ್ದಾಣ, ಗುಡ್ಡೆಮನೆ, ಕುಗ್ವೆ, ಎಲ್.ಬಿ. ಕಾಲೇಜು ಸಮೀಪ ಶಾಸಕರ ಅನುದಾನದಲ್ಲಿ ಬಸ್ಸು ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಎಲ್ಲಾ ಬಸ್ಸು ನಿಲ್ದಾಣಗಳ ಕಾಮಗಾರಿ ತೀರ ಕಳಪೆಯಾಗಿದ್ದು, ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ದೂರಲಾಗಿದೆ.
ನಿಲ್ದಾಣದ ನಾಮಫಲಕದಲ್ಲಿ ವಿಧಾನಸಭಾ ಸದಸ್ಯರು ಸೊರಬ ಕ್ಷೇತ್ರ ಎಂದು ಮುದ್ರಣವಾಗ ಬೇಕಾದ ಕಡೆ ವಿಧಾನ ಸಾಭ ಸದಸ್ಯರು ಸೋರಬ ಕ್ಷೇತ್ರ ಎಂದು ತಪ್ಪಾಗಿ ಬರೆಯಲಾಗಿದೆ. ಒಂದರ್ಥದಲ್ಲಿ ಅಧಿಕಾರಿಗಳು ಕನ್ನಡ ಭಾಷೆಯನ್ನು ಕಗ್ಗೊಲೆ ಮಾಡುವ ಕೆಲಸ ಮಾಡಿದ್ದಾರೆ ಎಂದು ದೂರಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿಲ್ದಾಣಗಳನ್ನು ಶಿವಮೊಗ್ಗ ನಿರ್ಮಿತಿ ಕೇಂದ್ರದ ಅಧಿಕಾರಿ ನಾಗರಾಜ್ ಎಂಬುವವರ ಉಸ್ತುವಾರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗ ಸೊರಬ ಕ್ಷೇತ್ರದ ಶಾಸಕರು ಮಧು ಬಂಗಾರಪ್ಪ ಎನ್ನುವುದನ್ನು ಅಧಿಕಾರಿಗಳು ಮರೆತಂತೆ ಕಾಣುತ್ತಿದೆ. ಏಕೆಂದರೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಎಲ್ಲಾ ನಿಲ್ದಾಣದ ನಾಮಫಲಕದಲ್ಲಿಯೂ ಎಚ್. ಹಾಲಪ್ಪ ಅವರನ್ನು ಶಾಸಕರು ಎಂದು ನಮೂದಿಸಿರುವ ಕ್ರಮ ಖಂಡನೀಯ ಎಂದು ತಾಳಗುಪ್ಪ ಹೋಬಳಿ ಜೆಡಿ(ಎಸ್) ಯುವ ಘಟಕದ ಅಧ್ಯಕ್ಷ ಲೋಕೇಶ್ ಗಾಳಿಪುರ, ಕುಗ್ವೆ ಅಣ್ಣಪ್ಪ, ಅಶೋಕ ಬರದವಳ್ಳಿ, ಜಗದೀಶ್ ಗಾಳಿಪುರ, ಚಂದ್ರು ಜನ್ನೆಹಕ್ಲು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement