ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತದಾರರ ಪಟ್ಟಿ ಪರಿಷ್ಕರಣೆ

Lingaraj Badiger
Updated On : 31 Aug 2013, 11:00 am

ಶಿವಮೊಗ್ಗ: ನಗರಸಭೆಯು ಚುನಾವಣಾ ಆಯೋಗದ ಸೂಚನೆಯಂತೆ 13-ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆಗೆ ಕ್ರಮ ಕೈಗೊಂಡಿದೆ. ಮತದಾರರು ಮತದಾರರ ಪಟ್ಟಿಯ ವಿವರಗಳನ್ನು ಆಯೋಗದ ಅಂತರ್ಜಾಲ ತಾಣ ಢಿಢಿಢಿ.್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ ಪರಿಶೀಲಿಸಬಹುದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಕೈಬಿಡತಕ್ಕವು ಹಾಗೂ ಮಾರ್ಪಾಡುಗಳ ಬಗ್ಗೆ ನಿಗದಿತ ನಮೂನೆಯಲ್ಲಿ ಆನ್‌ಲೈನ್‌ನಲ್ಲಿ ಅಥವಾ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗಾಗಲಿ ಅಥವಾ ಶಿವಮೊಗ್ಗ ನಗರಸಭಾ ಕಚೇರಿ ಚುನಾವಣಾ ವಿಭಾಗದಲ್ಲಿಯಾಗಲಿ ಸಲ್ಲಿಸುವಂತೆ ನಗರಸಭಾ ಪೌರಾಯುಕ್ತ ಎಂ. ಕರಭೀಮಣ್ಣನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪ್ರಶಸ್ತಿಗೆ ಶಿಕ್ಷಕ ರಾಜೇಂದ್ರ
ಬುರಡಿಕಟ್ಟಿ ಆಯ್ಕೆ
ಶಿವಮೊಗ್ಗ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಂತ್ರಾಲಯವು ತೀರ್ಥಹಳ್ಳಿ ತಾಲೂಕು ಸಾಲೇಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ಡಾ. ರಾಜೇಂದ್ರ ಬುರಡಿಕಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಹಾಗೂ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, 2012ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡಿದೆ.
ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವ ಡಾ. ರಾಜೇಂದ್ರಬುರಡಿಕಟ್ಟಿ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement