ಅವಧಿ ಮೀರಿದ ಪಾನೀಯ ಸೇವನೆ: 4 ಅಸ್ವಸ್ಥ
ಶಿವಮೊಗ್ಗ: ಅವಧಿ ಮೀರಿದ ತಂಪು ಪಾನೀಯ ಸೇವಿಸಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಶಂಕರಘಟ್ಟದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಕೆಲವು ಅಂಗಡಿಗಳ ಮೇಲೆ ದಾಳಿ ಮಾಡಿದ ಪೊಲೀಸರು 1.5 ಲಕ್ಷ ಮೌಲ್ಯದ ತಂಪು ಪಾನೀಯ ವಶಪಡಿಸಿಕೊಂಡಿದ್ದಾರೆ.
ಕೆಲವು ಅಂಗಡಿಗಳಲ್ಲಿ ಅವಧಿ ಮೀರಿದ್ದ ಪೆಪ್ಸಿ ತಂಪು ಪಾನೀಯವನ್ನು ಮಾರಾಟ ಮಾಡುತ್ತಿದ್ದು, ಇದನ್ನು ಸೇವಿಸಿದ ನಾಲ್ವರು ಅಸ್ವಸ್ಥಗೊಂಡಿದ್ದರು. ಕೆಲ ವ್ಯಾಪಾರಸ್ಥರು ಬಾ ಟಲ್ಗಳ ಮೇಲೆ ನಮೂದಿಸಿದ್ದ ದಿನಾಂಕವನ್ನು ಅಳಿಸಿ ಮಾರಾಟ ಮಾಡುತ್ತಿದ್ದರು.