ಜ್ಯೋತಿರಾಜ್ಗೆ ಆರ್ಥಿಕ ನೆರವು
ಶಿವಮೊಗ್ಗ: ಸಾಹಸ ಮತ್ತು ಸಂಸ್ಕೃತಿ ಜಿಲ್ಲಾ ಆಕಾಡೆಮಿ, ಯೂತ್ ಹಾಸ್ಟೆಲ್ ಅಸೋಷಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದಿಂದ ಸಾಹಸಿ ಜ್ಯೋತಿರಾಜ್ರವರಿಗೆ ಆರ್ಥಿಕ ನೆರವು ನೀಡಲಾಯಿತು. ಮಥುರಾ ಪ್ಯಾರಡೈಸ್ನ ಚಾಣಕ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಸಿ ಜ್ಯೋತಿರಾಜ್ರವರಿಗೆ ಜೀವರಕ್ಷಕ ಕವಚ ಹಾಗೂ ನಗದು ಹಣ ನೀಡಿ ಗೌರವಿಸಲಾಯಿತು. ಯೂತ್ ಹಾಸ್ಟೆಲ್ನ ಅಧ್ಯಕ್ಷ ಅ.ನಾ. ವಿಜಯೇಂದ್ರರಾವ್, ಯೂತ್ ಹಾಸ್ಟೆಲ್ ರಾಜ್ಯ ಘಟಕದ ನಿರ್ದೇಶಕ ವಿಜಯಕುಮಾರ್, ಸ ಮಂಜುನಾಥ್,. ಆಚಿ ಪ್ರಕಾಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್, ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ್, ಉಪಾಧ್ಯಕ್ಷ ಜೆಸುದಾಸ್ ಉಪಸ್ಥಿತರಿದ್ದರು.